alex Certify
ಕನ್ನಡ ದುನಿಯಾ       Mobile App
       

Kannada Duniya

ಮಹಾಲಕ್ಷ್ಮಿ ಮಂದಿರಕ್ಕೆ ಜಹೀರ್-ಸಾಗರಿಕಾ ದಂಪತಿ ಭೇಟಿ

ಭಾರತೀಯ ಚಿತ್ರರಂಗ ಹಾಗೂ ಟಿವಿ ಜಗತ್ತಿನಲ್ಲಿ ಈಗ ಮದುವೆಗಳ ಸುಗ್ಗಿ. ಸೆಲೆಬ್ರಿಟಿಗಳೆಲ್ಲ ಒಬ್ಬೊಬ್ಬರಾಗಿಯೇ ದಾಂಪತ್ಯ ಜೀವನಕ್ಕೆ ಕಾಲಿಡ್ತಿದ್ದಾರೆ. ಸ್ಟಾರ್ ಜೋಡಿಯಾದ ಜಹೀರ್ ಖಾನ್ ಹಾಗೂ ಸಾಗರಿಕಾ ಘಾಟ್ಕೆ ವಿವಾಹ ನವೆಂಬರ್ 23ರಂದು ಮುಂಬೈನಲ್ಲಿ ನೆರವೇರಿತ್ತು.

ಸಿಂಪಲ್ ಆಗಿ ರಿಜಿಸ್ಟರ್ ಮ್ಯಾರೇಜ್ ಮಾಡಿಕೊಂಡಿದ್ದ ಈ ಜೋಡಿ, ನಂತರ ಸ್ನೇಹಿತರು ಮತ್ತು ಬಂಧುಗಳಿಗಾಗಿ ಭರ್ಜರಿ ಪಾರ್ಟಿ ಆಯೋಜಿಸಿದ್ದರು. ಇದೀಗ ಕೊಲ್ಹಾಪುರಕ್ಕೆ ಆಗಮಿಸಿದ್ದ ಜಹೀರ್ ಖಾನ್ ಹಾಗೂ ಸಾಗರಿಕಾ ಘಾಟ್ಕೆ ಮಹಾಲಕ್ಷ್ಮಿ ದೇಗುಲಕ್ಕೆ ಭೇಟಿ ನೀಡಿದ್ರು.

ಸಂಬಂಧಿಕರು ಕೂಡ ನವದಂಪತಿ ಜೊತೆಗೆ ಆಗಮಿಸಿದ್ರು. ಸಾಗರಿಕಾ ಅಚ್ಚ ಕೆಂಪು ಬಣ್ಣದ ಸೀರೆ ಉಟ್ಟಿದ್ರೆ, ಜಹೀರ್ ಖಾನ್ ಬಿಳಿ ಕುರ್ತಾ ತೊಟ್ಟು, ಹಣೆಯಲ್ಲಿ ತಿಲವಿಟ್ಟುಕೊಂಡಿದ್ರು. ಹೊಸಬಾಳಿಗೆ ಕಾಲಿಟ್ಟಿರುವ ಯುವ ಜೋಡಿ ದೇವಿಯ ದರ್ಶನ ಪಡೆದು, ಆಶೀರ್ವಾದ ಬೇಡಿದ್ದಾರೆ.

Mr khans first visit home 🏠. #kolhapur @zaheer_khan34

A post shared by Sagarika (@sagarikaghatge) on

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...