alex Certify
ಕನ್ನಡ ದುನಿಯಾ       Mobile App
       

Kannada Duniya

”ಸಚಿನ್ ಕೇವಲ ಒಬ್ಬರೇ, ಇನ್ನೊಬ್ಬರಾಗಲು ಸಾಧ್ಯವಿಲ್ಲ”

sachin_5q8u5wi

ಜೂನ್ ನಲ್ಲಿ ಶುರುವಾಗಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿಗೂ ಮೊದಲೇ ಭಾರತ ತಂಡಕ್ಕೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಶುಭ ಹಾರೈಸಿದ್ದಾರೆ. ಸಚಿನ್ ಕೇವಲ ಒಬ್ಬರೆ. ಇನ್ನೊಬ್ಬ ಸಚಿನ್ ಆಗಲು ಸಾಧ್ಯವಿಲ್ಲ ಎಂದು ಸಚಿನ್ ತೆಂಡೂಲ್ಕರ್ ಹೇಳಿದ್ದಾರೆ.

ತಂಡದ ಎಲ್ಲ ಸದಸ್ಯರು ಒಂದಾಗಿ ಆಟವಾಡಬೇಕು. ತಂಡದ ಒಂದೇ ವ್ಯಕ್ತಿ ಮೇಲೆ ಭರವಸೆ ಇಡಬಾರದು ಎಂದು ಸಚಿನ್ ತೆಂಡೂಲ್ಕರ್ ಟೀಂ ಇಂಡಿಯಾಕ್ಕೆ ಸಲಹೆ ನೀಡಿದ್ದಾರೆ.

ಸಚಿನ್ ತೆಂಡೂಲ್ಕರ್ ರಂತಹ ಆಟಗಾರರು ಇನ್ಮುಂದೆ ಟೀಂ ಇಂಡಿಯಾಕ್ಕೆ ಸಿಗಬಹುದಾ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿನ್, ಮತ್ತೊಮ್ಮೆ ಸಚಿನ್ ತೆಂಡೂಲ್ಕರ್ ರಂತವರು ಕ್ರಿಕೆಟ್ ಗೆ ಬರ್ತಾರೆಂದು ನಾನು ಯೋಚಿಸಿಲ್ಲ. ಅವರು ಬೇರೆಯವರಾಗಿರುತ್ತಾರೆ. ಸಚಿನ್ ಕೇವಲ ಒಬ್ಬರೆ ಎಂದಿದ್ದಾರೆ. ಗೆಲುವು ತಂಡದ್ದೇ ಹೊರತು ಒಬ್ಬ ಆಟಗಾರನದ್ದಲ್ಲ. 2011ರ ವಿಶ್ವಕಪ್ ನಲ್ಲಿ ಕೂಡ ಟೀಂ ಇಂಡಿಯಾ ಗೆಲುವು ಸಾಧಿಸಿತ್ತೇ ವಿನಃ ಒಬ್ಬ ಆಟಗಾರನಲ್ಲ ಎಂದಿದ್ದಾರೆ ಸಚಿನ್.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...