alex Certify
ಕನ್ನಡ ದುನಿಯಾ       Mobile App
       

Kannada Duniya

ಗುರು ಅಚ್ರೇಕರ್ ಕಾಲಿಗೆರಗಿದ ಮಾಸ್ಟರ್ ಬ್ಲಾಸ್ಟರ್

ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ತಮ್ಮ ಮೊಟ್ಟ ಮೊದಲ ಬ್ಯಾಟಿಂಗ್ ಕೋಚ್ ರಮಾಕಾಂತ್ ಅಚ್ರೇಕರ್ ಅವರ ಮನೆಗೆ ತೆರಳಿ ಕಾಲಿಗೆ ಬಿದ್ದು ಆಶೀರ್ವಾದ ತೆಗೆದುಕೊಂಡಿದ್ದಾರೆ. ಸಚಿನ್ ಜೊತೆ ಅವರ ಸ್ನೇಹಿತ ಅತುಲ್ ರನಾಡೆ ಕೂಡ ಜೊತೆಗೆ ತೆರಳಿ ಗುರುವಿನ ಆಶೀರ್ವಾದ ಬೇಡಿದ್ದಾರೆ.

ಗುರುಪೂರ್ಣಿಮೆಯ ಅಂಗವಾಗಿ ರಮಾಕಾಂತ್ ಅವರ ಮನೆಗೆ ತೆರಳಿದ ಸಚಿನ್ ಮತ್ತವರ ಗೆಳೆಯ ಅತುಲ್ ತಮ್ಮ ಶಾಲಾ ದಿನಗಳ ಬ್ಯಾಟಿಂಗ್ ಕೋಚ್ ಮನೆಗೆ ತೆರಳಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಸಚಿನ್ ನಮ್ಮೊಳಗಿನ ಅತ್ಯುತ್ತಮವಾದ ವಿಚಾರವನ್ನು ನಾವೇ ಅರಿತುಕೊಳ್ಳೋದಕ್ಕೆ ಕಾರಣವಾದವರನ್ನು ನೆನಪಿಸಿಕೊಳ್ಳೋದಕ್ಕೆ ಸೂಕ್ತವಾದ ದಿನ ಗುರುಪೂರ್ಣಿಮೆ. ಅಚ್ರೇಕರ್ ಸರ್ ಮಾರ್ಗದರ್ಶವಿಲ್ಲದೆ ನಾನು ಸಾಧನೆ ಮಾಡೋಕೆ ಆಗ್ತಿರಲಿಲ್ಲ. ನಿಮ್ಮ ಗುರುಗಳಿಗೂ ಧನ್ಯವಾದ ತಿಳಿಸಿ ಆಶೀರ್ವಾದ ಪಡೆಯಲು ಮರೆಯಬೇಡಿ ಅಂತ ಸಚಿನ್ ಟ್ವೀಟ್ ಮಾಡಿದ್ದಾರೆ.

ಸಚಿನ್ ಅಚ್ರೇಕರ್ ಅವರಿಂದ ಆಶೀರ್ವಾದ ಪಡೆಯುತ್ತಿರುವ ಫೊಟೋಗಳು ಈಗ ಎಲ್ಲೆಡೆ ವೈರಲ್ ಆಗಿದ್ದು ನೆಟ್ಟಿಗರಿಂದ ಅಪಾರ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...