alex Certify
ಕನ್ನಡ ದುನಿಯಾ       Mobile App
       

Kannada Duniya

ಧರ್ಮಶಾಲಾದ ದಲೈಲಾಮಾ ನಿವಾಸಕ್ಕೆ ಸಚಿನ್ ಭೇಟಿ

ಕ್ರಿಕೆಟ್ ಜಗತ್ತಿನ ದಂತ ಕಥೆ ಸಚಿನ್ ತೆಂಡೂಲ್ಕರ್, ಟಿಬೆಟಿಯನ್ನರ ಧರ್ಮ ಗುರು ದಲೈಲಾಮಾರನ್ನು ಭೇಟಿಯಾಗಿ ಅವರ ಆಶೀರ್ವಾದ ಪಡೆದಿದ್ದಾರೆ. ಧರ್ಮಶಾಲಾಕ್ಕೆ ಪತ್ನಿ ಅಂಜಲಿ ಜೊತೆ ಖಾಸಗಿ ಭೇಟಿ ನೀಡಿರುವ ಸಚಿನ್, ಮೆಕ್ ಲಿಯಾಡ್ ಗಂಜ್ ನಲ್ಲಿರುವ ದಲೈಲಾಮಾರ ನಿವಾಸಕ್ಕೆ ಭೇಟಿ ನೀಡಿದ್ದರು.

ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ದಲೈಲಾಮಾರ ಆಶೀರ್ವಾದ ಪಡೆದು ಪುನೀತನಾಗಿದ್ದೇನೆ. ಅವರ ಭೇಟಿ ಸಂದರ್ಭದಲ್ಲಿ ಸಮಾಜದಲ್ಲಿ ಸಾಮರಸ್ಯ ನೆಲೆಸುವುದರ ಕುರಿತು ಚರ್ಚಿಸಿದ್ದೇನೆ ಎಂದಿದ್ದಾರೆ.

ಇದೇ ವೇಳೆ ಸಚಿನ್ ತೆಂಡೂಲ್ಕರ್ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ನ ಕ್ರೀಡಾಂಗಣಕ್ಕೆ ಭೇಟಿ ನೀಡಿದ್ದು, ಕಿರಿಯ ಕ್ರಿಕೆಟಿಗರಿಗೆ ಮಾರ್ಗದರ್ಶನ ಮಾಡಿದ್ದಾರೆ. ಕ್ರಿಕೆಟ್ ಜಗತ್ತಿನಲ್ಲಿ ತಮ್ಮದೇ ಛಾಪು ಮೂಡಿಸಿರುವ ಸಚಿನ್, ಹಲವು ದಾಖಲೆಗಳಿಗೆ ಪಾತ್ರರಾಗಿದ್ದಾರೆ. 2014 ರಲ್ಲಿ ದೇಶದ ಅತ್ಯುನ್ನತ ಪ್ರಶಸ್ತಿ ‘ಭಾರತ ರತ್ನ’ ಕ್ಕೆ ಭಾಜನರಾಗಿರುವ ಸಚಿನ್, ಕ್ರಿಕೆಟ್ ನಿಂದ ನಿವೃತ್ತಿಯಾದರೂ ಕಿರಿಯ ಕ್ರಿಕೆಟಿಗರಿಗೆ ಸಲಹೆ ಸೂಚನೆಗಳನ್ನು ನೀಡುತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...