alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರೀತಿಯ ನಿಸ್ಸಾನ್ ಕಾರನ್ನೇ ಮಾರಿಬಿಟ್ಟಿದ್ದಾರೆ ಸಚಿನ್ !

599769-nissangtrsachin

ಈ ಅಂದದ ಕಾರು ಇಷ್ಟು ದಿನ ಕ್ರಿಕೆಟ್ ದೇವರ ಮನೆಯಂಗಳದಲ್ಲಿ ನಿಂತಿತ್ತು. ಆದ್ರೆ ಈಗ ನಿಸ್ಸಾನ್ ಜಿಟಿ-ಆರ್ ಕಾರು ಬೇರೊಬ್ಬರ ಪಾಲಾಗಿದೆ. ಹೌದು ಸಚಿನ್ ತೆಂಡೂಲ್ಕರ್ ಇದನ್ನು ಮುಂಬೈನ ಕಾರ್ ಕಲೆಕ್ಟರ್ ಒಬ್ಬರಿಗೆ ಮಾರಾಟ ಮಾಡಿದ್ದಾರೆ. ನಿಸ್ಸಾನ್ ಜಿಟಿ-ಆರ್ ಕಾರು ಕಳೆದ ವರ್ಷ ಭಾರತದ ಮಾರುಕಟ್ಟೆಗೆ ಪ್ರವೇಶಿಸಿತ್ತು. ಈ ಕಾರಿನ ಆರಂಭಿಕ ಬೆಲೆ 1.99 ಕೋಟಿ ರೂಪಾಯಿ.

ಸುಂದರ ವಿನ್ಯಾಸ, ಅದ್ಬುತ ಪರ್ಫಾರ್ಮೆನ್ಸ್ ಜೊತೆಗೆ ಅತ್ಯಾಧುನಿಕ ತಂತ್ರಜ್ಞಾನ ಹೊಂದಿದ್ದ ಈ ಕಾರು ಸಚಿನ್ ಮನೆಯನ್ನೂ ಸೇರಿಕೊಂಡಿತ್ತು. ಸಚಿನ್ ಗೆ ಮೊದಲಿನಿಂದ್ಲೂ ಐಷಾರಾಮಿ ಕಾರುಗಳನ್ನು ಖರೀದಿಸುವ ಹವ್ಯಾಸವಿದೆ. ಹಾಗಾಗಿ ಈ ಕಾರು ಕೂಡ ಅವರ ಪಾರ್ಕಿಂಗ್ ಲಾಟ್ ನ ಅಂದವನ್ನು ಮತ್ತಷ್ಟು ಹೆಚ್ಚಿಸಿತ್ತು.

ಆದ್ರೆ ಈಗ ಸಚಿನ್ ಈ ಕಾರನ್ನು ಮಾರಾಟ ಮಾಡಿಬಿಟ್ಟಿದ್ದಾರೆ. ಈ ಹಿಂದೆ ಉಡುಗೊರೆಯಾಗಿ ಬಂದಿದ್ದ ಫೆರಾರಿ ಕಾರನ್ನು ಕೂಡ ಸಚಿನ್ ಸೂರತ್ ನ ಉದ್ಯಮಿಗೆ ಸೇಲ್ ಮಾಡಿದ್ದರು. 2002ರಲ್ಲಿ ಡಾನ್ ಬ್ರಾಡ್ಮನ್ ರ 29 ಶತಕಗಳ ದಾಖಲೆಯನ್ನು ಸರಿಗಟ್ಟಿದ ಹಿನ್ನೆಲೆಯಲ್ಲಿ ಫಿಯೆಟ್ ಕಂಪನಿ ಫೆರಾರಿ ಕಾರನ್ನು ಸಚಿನ್ ಗೆ ನೀಡಿತ್ತು. ಮೈಖೆಲ್ ಶುಮಾಕರ್, ಕಾರನ್ನು ಸಚಿನ್ ಗೆ ಹಸ್ತಾಂತರಿಸಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...