alex Certify
ಕನ್ನಡ ದುನಿಯಾ       Mobile App
       

Kannada Duniya

ಅಮಿತಾಭ್ ಎದುರು ಸಚಿನ್ ಗೆ ಮುಜುಗರ ತಂದಿತ್ತು ಈ ಘಟನೆ

ಅಮಿತಾಭ್ ಬಚ್ಚನ್ ವಿಶ್ವದಾದ್ಯಂತ ಹೆಸರು ಮಾಡಿರೋ ನಟ. ಕೇವಲ ಬಾಲಿವುಡ್ ಮಾತ್ರವಲ್ಲ ಎಲ್ಲಾ ಕ್ಷೇತ್ರದವರೂ ಬಿಗ್ ಬಿಯನ್ನು ಆರಾಧಿಸ್ತಾರೆ. ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಗೆ ಕೂಡ ಅಮಿತಾಭ್ ಅಂದ್ರೆ ಅಚ್ಚುಮೆಚ್ಚು. ಜಾಹೀರಾತು ಶೂಟಿಂಗ್ ಹಾಗೂ ವಿವಿಧ ಕಾರ್ಯಕ್ರಮಗಳಲ್ಲಿ ಹತ್ತಾರು ಬಾರಿ ಇಬ್ಬರೂ ದಿಗ್ಗಜರು ಭೇಟಿಯಾಗಿದ್ದಾರೆ.

ನಿನ್ನೆಯಷ್ಟೆ 75ನೇ ಹುಟ್ಟುಹಬ್ಬ ಆಚರಿಸಿಕೊಂಡಿರೋ ಬಾಲಿವುಡ್ ಶೆಹನ್ ಶಾಗೆ ಸಚಿನ್ ಶುಭ ಹಾರೈಸಿದ್ದಾರೆ. ಅದರ ಜೊತೆಜೊತೆಗೆ ತಮಗೆ ಮುಜುಗರ ತಂದಿದ್ದ ಘಟನೆಯೊಂದನ್ನು ಕೂಡ ನೆನಪಿಸಿಕೊಂಡಿದ್ದಾರೆ. ಸಚಿನ್ ಹಾಗೂ ಅಮಿತಾಭ್ ಜೊತೆಯಾಗಿ ಜಾಹೀರಾತೊಂದರ ಶೂಟಿಂಗ್ ನಲ್ಲಿ ಪಾಲ್ಗೊಂಡಿದ್ರು.

ಮಗ ಅರ್ಜುನ್ ನನ್ನು ಕೂಡ ಸಚಿನ್ ಸೆಟ್ ಗೆ ಕರೆದೊಯ್ದಿದ್ದರಂತೆ. ಆಗ ಅರ್ಜುನ್ ಇನ್ನೂ ಒಂದೂವರೆ ವರ್ಷದ ಮಗು. ಶೂಟಿಂಗ್ ಬ್ರೇಕ್ ವೇಳೆ ಅರ್ಜುನ್, ಅಪ್ಪನ ತೊಡೆ ಮೇಲೆ ಕುಳಿತು ಕಿತ್ತಳೆ ಹಣ್ಣು ತಿನ್ನುತ್ತಿದ್ದ. ಹಣ್ಣು ತಿಂದು ಮುಗಿಯುತ್ತಿದ್ದಂತೆ ಅಂಟಾಗಿದ್ದ ತನ್ನ ಕೈಗಳನ್ನು ಅಮಿತಾಭ್ ಬಚ್ಚನ್ ರ ಕುರ್ತಾಗೆ ಒರೆಸಿಬಿಟ್ಟಿದ್ದಾನೆ.

ಮಗ ಮಾಡಿದ ಕೆಲಸದಿಂದ ಸಚಿನ್ ಮುಜುಗರಕ್ಕೀಡಾದ್ರು. ಈ ಘಟನೆಯನ್ನು ಮಾಧ್ಯಮಗಳೊಂದಿಗೆ ಸಚಿನ್ ಹಂಚಿಕೊಂಡಿದ್ದಾರೆ. ಅಮಿತಾಭ್ ಒಬ್ಬ ಶ್ರೇಷ್ಠ ನಟ ಮಾತ್ರವಲ್ಲ, ಶ್ರೇಷ್ಠ ವ್ಯಕ್ತಿ ಅಂತಾ ಶ್ಲಾಘಿಸಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...