alex Certify
ಕನ್ನಡ ದುನಿಯಾ       Mobile App
       

Kannada Duniya

‘ಸಚಿನ್ : ಎ ಬಿಲಿಯನ್ ಡ್ರೀಮ್ಸ್’ ಚಿತ್ರಕ್ಕೆ ಮೋದಿ ಹಾರೈಕೆ

sachin

ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಇವತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ರು. ‘ಸಚಿನ್: ಎ ಬಿಲಿಯನ್ ಡ್ರೀಮ್ಸ್’ ಚಿತ್ರದ ಯಶಸ್ಸಿಗಾಗಿ ಪ್ರಧಾನಿ ಮೋದಿ ಅವರ ಆಶೀರ್ವಾದ ಪಡೆದ್ರು. ಮೋದಿ ಭೇಟಿ ಬಗ್ಗೆ ತಮ್ಮ ಟ್ವಿಟ್ಟರ್ ಪೇಜ್ ನಲ್ಲಿ ತೆಂಡೂಲ್ಕರ್ ಪೋಸ್ಟ್ ಮಾಡಿದ್ದಾರೆ.

dak_vivuaaiwtfi

‘ಸಚಿನ್: ಎ ಬಿಲಿಯನ್ ಡ್ರೀಮ್ಸ್’ ಚಿತ್ರದ ಬಗ್ಗೆ ಮೋದಿ ಅವರಿಗೆ ತೆಂಡೂಲ್ಕರ್ ವಿವರಿಸಿದ್ದಾರಂತೆ. ಈ ವೇಳೆ ಪತ್ನಿ ಅಂಜಲಿ ಕೂಡ ಸಚಿನ್ ಜೊತೆಗಿದ್ರು. ಮೋದಿ ಕೂಡ ಸಚಿನ್ ಭೇಟಿಯ ಬಗ್ಗೆ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ. ಸಚಿನ್ ಅವರ ಬದುಕು ಪ್ರತಿಯೊಬ್ಬ ಭಾರತೀಯನಿಗೂ ಪ್ರೇರಣೆ ಅಂತಾ ಬಣ್ಣಿಸಿದ್ದಾರೆ.

ತೆಂಡೂಲ್ಕರ ಅವರ ಕ್ರಿಕೆಟ್ ಬದುಕು ಮತ್ತು ವೈಯಕ್ತಿಕ ಜೀವನವನ್ನು ‘ಸಚಿನ್ : ಎ ಬಿಲಿಯನ್ ಡ್ರೀಮ್ಸ್’ ಚಿತ್ರ ತೆರೆದಿಡಲಿದೆ. ಅಭಿಮಾನಿಗಳು ಇದುವರೆಗೂ ಕೇಳರಿಯದ ಕುತೂಹಲಕರ ಸಂಗತಿಗಳು ಚಿತ್ರದಲ್ಲಿವೆಯಂತೆ. ಈ ಚಿತ್ರ ಮೇ 26ರಂದು ರಿಲೀಸ್ ಆಗಲಿದೆ.

 

Subscribe Newsletter

Get latest updates on your inbox...

Opinion Poll

  • ಕಪ್ಪು ಹಣಕ್ಕೆ ಕಡಿವಾಣ ಹಾಕುವ ಕೇಂದ್ರ ಸರ್ಕಾರದ ಪ್ರಯತ್ನ ವಿಫಲವಾಗಿದೆಯೇ..?

    View Results

    Loading ... Loading ...