alex Certify
ಕನ್ನಡ ದುನಿಯಾ       Mobile App
       

Kannada Duniya

ಬ್ಯಾಡ್ಮಿಂಟನ್ ಅಂಗಳಕ್ಕೂ ಕಾಲಿಟ್ಟ ಸಚಿನ್ ತೆಂಡೂಲ್ಕರ್

sachin-badmಬೆಂಗಳೂರು: ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್( ಪಿ.ಬಿ.ಎಲ್.) ಟೂರ್ನಿಯಲ್ಲಿ, ಬೆಂಗಳೂರು ಬ್ಲಾಸ್ಟರ್ಸ್ ತಂಡದ ಫ್ರಾಂಚೈಸ್ ನ ಸಹಮಾಲೀಕರಾಗುವ ಮೂಲಕ, ಸಚಿನ್ ತೆಂಡೂಲ್ಕರ್ ಬ್ಯಾಡ್ಮಿಂಟನ್ ಅಂಗಳಕ್ಕೆ ಕಾಲಿಟ್ಟಿದ್ದಾರೆ.

ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಚಿನ್ ತೆಂಡೂಲ್ಕರ್, ಎಲ್ಲರಿಗೂ ನಮಸ್ಕಾರ ಎಂದು ಕನ್ನಡದಲ್ಲಿಯೇ ಮಾತು ಆರಂಭಿಸಿ, ಬೆಂಗಳೂರಿನೊಂದಿಗಿನ ತಮ್ಮ ಒಡನಾಟವನ್ನು ನೆನಪಿಸಿಕೊಂಡಿದ್ದಾರೆ. ಇಲ್ಲಿ ಹಲವಾರು ಕ್ರಿಕೆಟ್ ಪಂದ್ಯಗಳನ್ನು ಆಡಿರುವ ತಮಗೆ ಹಲವು ಸ್ನೇಹಿತರಿದ್ದಾರೆ. ಬೆಂಗಳೂರು ಬ್ಲಾಸ್ಟರ್ಸ್ ತಂಡದಿಂದ ಮತ್ತೆ ಬೆಂಗಳೂರಿನೊಂದಿಗೆ ಸಂಪರ್ಕ ಬೆಳೆದಿದೆ ಎಂದು ಹೇಳಿದ್ದಾರೆ.

ಭಾರತದ ಬ್ಯಾಡ್ಮಿಂಟನ್ ಪಟುಗಳು ಸಾಧನೆ ಮಾಡಿದ್ದಾರೆ. ಕ್ರೀಡೆಗೆ ಪ್ರೋತ್ಸಾಹ ನೀಡುವ ಮೂಲಕ ನವ ಪ್ರತಿಭೆಗಳಿಗೆ ಅವಕಾಶ ಮಾಡಿಕೊಡಬೇಕಿದೆ ಕ್ರಿಕೆಟ್ ನಂತೆಯೇ ಫುಟ್ ಬಾಲ್ ಕೂಡ ನನ್ನ ಮೆಚ್ಚಿನ ಆಟವಾಗಿದೆ ಎಂದು ತಿಳಿಸಿದ್ದಾರೆ.

ಬೆಂಗಳೂರು ತಂಡಕ್ಕೆ ನಟರಾದ ಚಿರಂಜೀವಿ, ಅಕ್ಕಿನೇನಿ ನಾಗಾರ್ಜುನ, ಅಲ್ಲು ಅರವಿಂದ್ ಕೂಡ ಸಹ ಮಾಲೀಕರಾಗಿದ್ದಾರೆ. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ನಟ ಅಲ್ಲು ಅರ್ಜುನ್ ಮಾತನಾಡಿ, ತಮಗೆ ಚಿತ್ರರಂಗದಷ್ಟೇ ಪ್ರೀತಿ ಕ್ರೀಡೆಯ ಮೇಲಿದೆ ಎಂದು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...