alex Certify
ಕನ್ನಡ ದುನಿಯಾ       Mobile App
       

Kannada Duniya

ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾದ ಸಚಿನ್ ಫೋಟೋ

sachin_b-020716 (1)

ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ದೇಶಪ್ರೇಮದ ಬಗ್ಗೆ ಹೇಳಬೇಕಾಗಿಲ್ಲ. ಸಚಿನ್ ದೇಶಪ್ರೇಮ ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡ್ತಾ ಇದೆ. ಸಚಿನ್ ತೆಂಡೂಲ್ಕರ್ ಫೇಸ್ಬುಕ್ ಹಾಗೂ ಟ್ವಿಟರ್ ಗೆ ಒಂದು ಫೋಟೋವನ್ನು ಫೋಸ್ಟ್ ಮಾಡಿದ್ದು, ಅಲ್ಲಿ ಸಚಿನ್ ದೇಶಪ್ರೇಮವನ್ನು ನಾವು ಸ್ಪಷ್ಟವಾಗಿ ನೋಡಬಹುದಾಗಿದೆ.

ಬಿಸಿಲ ಝಳದಿಂದ ತಪ್ಪಿಸಿಕೊಳ್ಳಲು ಐಸ್ ಲ್ಯಾಂಡ್ ಗೆ ಹೋಗಿರುವ ಸಚಿನ್ ಗೆ ಬೇರೆ ದೇಶದಲ್ಲಿ ಕೂಡ ಭಾರತ ಕಂಡಿದೆ. ಸರೋವರವೊಂದರಲ್ಲಿ  ಭಾರತ ನಕ್ಷೆ ಮೂಡಿದಂತಿದೆ. ಇದನ್ನು ನೋಡಿ ಖುಷಿಗೊಂಡ ಸಚಿನ್ ಒಂದು ಸೆಲ್ಫಿ ತೆಗೆದಿದ್ದಾರೆ. ಅದನ್ನು ಸಾಮಾಜಿಕ ಜಾಲತಾಣಗಳಿಗೆ ಅಪ್ ಲೋಡ್ ಮಾಡಿದ್ದಾರೆ. ಫೋಟೋ ಜೊತೆಗೆ ಸಾರೆ ಜಹಾಂ ಸೇ ಅಚ್ಛಾ ಹಿಂದೂಸ್ತಾನ್ ಹಮಾರಾ ಎಂದು ಬರೆದಿದ್ದಾರೆ.

ಸಚಿನ್ ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಲಂಡನ್ ನಲ್ಲಿರುವ ಸಚಿನ್ ಸಾಕಷ್ಟು ಫೋಟೋಗಳನ್ನು ಅಭಿಮಾನಿಗಳಿಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್ ಲೋಡ್ ಮಾಡ್ತಿದ್ದಾರೆ. ವಿಭಿನ್ನ ಲುಕ್ ಗಳಲ್ಲಿ ಸಚಿನ್ ಫೋಟೋಕ್ಕೆ ಪೋಸ್ ಕೊಟ್ಟಿದ್ದು, ಸಚಿನ್ ಅಭಿಮಾನಿಗಳು ಇದನ್ನು ನೋಡಿ ಖುಷಿಯಾಗಿದ್ದಾರೆ. ಸಾಕಷ್ಟು ಕಮೆಂಟ್ ಕೂಡ ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...