alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರೋ ಕಬಡ್ಡಿ ಅಖಾಡಕ್ಕೆ ಕ್ರಿಕೆಟ್ ದೇವರು

sachin

ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಈಗ ಕಬಡ್ಡಿ ಅಖಾಡಕ್ಕೆ ಇಳಿದಿದ್ದಾರೆ. ವಿವೋ ಪ್ರೋ ಕಬಡ್ಡಿ ಲೀಗ್ ನ 5ನೇ ಆವೃತ್ತಿಯಲ್ಲಿ ಸಚಿನ್ ಮಾಲೀಕತ್ವದ ತಂಡ ಆಡಲಿದೆ. ತಮಿಳುನಾಡು, ಗುಜರಾತ್, ಉತ್ತರ ಪ್ರದೇಶ ಮತ್ತು ಹರಿಯಾಣದ ನಾಲ್ಕು ಹೊಸ ತಂಡಗಳು ಈ ಬಾರಿ ಕಣಕ್ಕಿಳಿಯಲಿವೆ. ತಂಡಗಳ ಹೆಸರನ್ನು ಇನ್ನೂ ಬಹಿರಂಗಪಡಿಸಿಲ್ಲ.

ಚೆನ್ನೈ ಮೂಲದ ಫ್ರಾಂಚೈಸಿ ಇಕ್ವೆಸ್ಟ್ ಎಂಟರ್ ಪ್ರೈಸೆಸ್ ಪ್ರೈವೇಟ್ ಲಿಮಿಟೆಡ್ ಕೂಡ ತಂಡವೊಂದರ ಮಾಲೀಕತ್ವ ಪಡೆದಿದ್ದು, ಅದರಲ್ಲಿ ಸಚಿನ್ ಸಹ ಮಾಲೀಕರಾಗಿದ್ದಾರೆ. ಜೆಎಸ್ ಡಬ್ಲ್ಯೂ ಗ್ರೂಪ್, ಅದಾನಿ ಗ್ರೂಪ್ ಹಾಗೂ ಜಿಎಂಆರ್ ಗ್ರೂಪ್ ಕೂಡ ತಲಾ ಒಂದೊಂದು ಕಬಡ್ಡಿ ತಂಡವನ್ನು ಹೊಂದಲಿವೆ.

13 ವಾರಗಳ ಕಾಲ ಪ್ರೋ ಕಬಡ್ಡಿ ಟೂರ್ನಿ ನಡೆಯಲಿದ್ದು, 130 ಪಂದ್ಯಗಳನ್ನು ಆಯೋಜಿಸಲಾಗ್ತಿದೆ. ಟೂರ್ನಿಗಾಗಿ ಸ್ಟಾರ್ ಇಂಡಿಯಾ, ವಿವೋ ಸ್ಮಾರ್ಟ್ ಫೋನ್ ಕಂಪನಿ ಜೊತೆಗೆ ಒಪ್ಪಂದ ಮಾಡಿಕೊಂಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...