alex Certify
ಕನ್ನಡ ದುನಿಯಾ       Mobile App
       

Kannada Duniya

ಸಚಿನ್ ದಾಖಲೆ ಸರಿಗಟ್ಟುವ ಬಗ್ಗೆ ಕೊಹ್ಲಿ ಹೇಳಿದ್ದಿಷ್ಟು….

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಸಚಿನ್ ತೆಂಡೂಲ್ಕರ್ ದಾಖಲೆ ಮುರಿಯುವತ್ತ ದಿಟ್ಟ ಹೆಜ್ಜೆ ಇಟ್ಟಿದ್ದಾರೆ. ವಿಶ್ವದಲ್ಲಿ ಅತಿ ಹೆಚ್ಚು ಶತಕ ಬಾರಿಸಿರುವ ಅದ್ವಿತೀಯ ದಾಖಲೆ ಸಚಿನ್ ಹೆಸರಲ್ಲಿದೆ. ಕೊಹ್ಲಿ ಈಗ ಅತ್ಯಧಿಕ ಶತಕ ಸಿಡಿಸಿದ ಆಟಗಾರರಲ್ಲಿ ಎರಡನೆಯವರು.

30ನೇ ಸೆಂಚುರಿ ಬಾರಿಸುವ ಮೂಲಕ ರಿಕಿ ಪಾಂಟಿಂಗ್ ದಾಖಲೆಯನ್ನು ಸರಿಗಟ್ಟಿದ್ದಾರೆ. ಸಚಿನ್ ದಾಖಲೆ ಮುರಿಯಲು ವಿರಾಟ್ ಗೆ ಇನ್ನು 19 ಶತಕಗಳು ಬೇಕು. ಆದ್ರೆ ಸದ್ಯಕ್ಕಂತೂ ಅದು ಅಸಾಧ್ಯ ಅಂತಾ ಕೊಹ್ಲಿ ಹೇಳಿದ್ದಾರೆ.

ಸಚಿನ್ ಮಾಡಿರೋ ಅತ್ಯದ್ಭುತ ದಾಖಲೆಯನ್ನು ಸರಿಗಟ್ಟಲು ಸಾಕಷ್ಟು ಪರಿಶ್ರಮ ಪಡಬೇಕು. ಸದ್ಯಕ್ಕೆ ಅದರ ಬಗ್ಗೆ ಯೋಚನೆಯನ್ನೂ ಮಾಡಿಲ್ಲ. ನಾನು 90 ರನ್ ಗಳಿಸಿ ನಾಟೌಟ್ ಆಗಿ ಉಳಿದರೂ ಚಿಂತೆಯಿಲ್ಲ, ತಂಡ ಗೆಲ್ಲಬೇಕು ಅಷ್ಟೆ ಅಂತಾ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ.

ಈ ವರ್ಷ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆ ಕೂಡ ಕೊಹ್ಲಿ ಪಾಲಾಗಿದೆ. ಗೆದ್ದಾಗ ಹಿಗ್ಗದೇ, ಸೋತಾಗ ಕುಗ್ಗದೇ ಇದ್ರೆ ಸಾಧನೆಗಳು ಅಸಾಧ್ಯವಲ್ಲ ಎನ್ನುತ್ತಾರೆ ಟೀಂ ಇಂಡಿಯಾದ ಕಫ್ತಾನ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...