alex Certify
ಕನ್ನಡ ದುನಿಯಾ       Mobile App
       

Kannada Duniya

ಸಚಿನ್, ರಾಹುಲ್, ಧೋನಿಗೆ ಮೀಸೆ ಮೂಡಿದಾಗ….

shikhar-dhawan-tweet_650x400_71498043874ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಟೀಮ್ ಇಂಡಿಯಾ ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ದ ಹೀನಾಯವಾಗಿ ಸೋತಿದ್ದಕ್ಕೆ ಕೆಲ ಅಭಿಮಾನಿಗಳು ಬೇಸರಗೊಂಡು ಅತಿರೇಖದ ವರ್ತನೆ ತೋರಿಸಿದ್ದಾರೆ.

ಹೀಗಾಗಿ ಟೀಮ್ ಇಂಡಿಯಾದ ಆಟಗಾರರ ಮನೆ ಮುಂದೆ ಭದ್ರತೆಯನ್ನು ಏರ್ಪಡಿಸಲಾಗಿದೆ. ಈ ಮಧ್ಯೆ ಪಾಕ್ ಆಟಗಾರ ಅಜರ್ ಆಲಿಯ ಮಕ್ಕಳೊಂದಿಗೆ ಧೋನಿ, ಕೊಹ್ಲಿ, ಯುವರಾಜ್ ಸಿಂಗ್ ಫೋಟೋಗೆ ಪೋಸ್ ಕೊಟ್ಟಿದ್ದು, ಇದಕ್ಕೆ ಧನ್ಯವಾದ ಹೇಳಿ ಅಜರ್ ಆಲಿ ಮಾಡಿದ ಟ್ವೀಟ್ ವೈರಲ್ ಆಗಿತ್ತಲ್ಲದೇ ಆಟಗಾರರ ಕ್ರೀಡಾ ಸ್ಪೂರ್ತಿಗೆ ಮೆಚ್ಚುಗೆ ವ್ಯಕ್ತವಾಗಿತ್ತು.

ಈ ನಡುವೆ ಕಮೆಡಿಯನ್ ವಿಕ್ರಮ್ ಸತೇಯಿ ಷೋ ನಲ್ಲಿ ಪಾಲ್ಗೊಂಡಿದ್ದ ಟೀಮ್ ಇಂಡಿಯಾ ಆಟಗಾರ ಶಿಖರ್ ಧವನ್ ಮಾಡಿದ ಕಾರ್ಯವೊಂದು ಈಗ ವೈರಲ್ ಆಗಿದೆ. ತಮ್ಮ ಹುರಿ ಮೀಸೆಗೆ ಫೇಮಸ್ ಆಗಿರುವ ಶಿಖರ್ ಧವನ್ ಗೆ ವಿಕ್ರಮ್, ಯಾವ ಕ್ರಿಕೆಟ್ ಆಟಗಾರರನ್ನು ನೀವು ಮೀಸೆಯಲ್ಲಿ ನೋಡಬಯಸುತ್ತೀರಿ ಎಂದು ಕೇಳಿದ್ದು, ಶಿಖರ್ ಧವನ್, ಸಚಿನ್ ತೆಂಡೂಲ್ಕರ್, ಮಹೇಂದ್ರ ಸಿಂಗ್ ಧೋನಿ, ರಾಹುಲ್ ದ್ರಾವಿಡ್, ಗೌತಮ್ ಗಂಭೀರ್ ಮೊದಲಾದವರ ಹೆಸರನ್ನು ಹೇಳಿದ್ದಾರೆ. ಜೊತೆಗೆ ಮೀಸೆ ಮೂಡಿಸಲಾಗಿದ್ದ ಈ ಕ್ರಿಕೆಟ್ ಆಟಗಾರರ ಫೋಟೋವನ್ನು ಶಿಖರ್ ಧವನ್ ಸಾಮಾಜಿಕ ಜಾಲತಾಣ ಟ್ವೀಟರ್ ನಲ್ಲಿ ಶೇರ್ ಮಾಡಿದ್ದು,ಅದೀಗ ವೈರಲ್ ಆಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...