alex Certify
ಕನ್ನಡ ದುನಿಯಾ       Mobile App
       

Kannada Duniya

ವಿವಾದದ ನಂತ್ರ ಕಲಾಪಕ್ಕೆ ಹಾಜರಾದ ಸಚಿನ್

sachinaaa_1501744890_618x347

ಭಾರತದ ಕ್ರಿಕೆಟ್ ತಂಡದ ಮಾಜಿ ಆಟಗಾರ ಸಚಿನ್ ತೆಂಡೂಲ್ಕರ್ ಇಂದು ರಾಜ್ಯಸಭಾ ಕಲಾಪದಲ್ಲಿ ಕಾಣಿಸಿಕೊಂಡಿದ್ದಾರೆ. ಸಚಿನ್ ಕಲಾಪದಲ್ಲಿ ಯಾವುದೇ ಪ್ರಶ್ನೆಗಳನ್ನು ಕೇಳಲಿಲ್ಲ. ಆದ್ರೆ ಸದನಕ್ಕೆ ಹಾಜರಾಗಿದ್ದರು.

ಸಚಿನ್ ಜೊತೆ ಮೇರಿಕೋಮ್ ಕೂಡ ರಾಜ್ಯಸಭೆ ಕಲಾಪಕ್ಕೆ ಹಾಜರಾಗಿದ್ದರು. ಎರಡು ದಿನಗಳ ಹಿಂದಷ್ಟೆ ಎಸ್ಪಿ ನಾಯಕ ನರೇಶ್ ಅಗರ್ವಾಲ್ ಸಚಿನ್ ಹಾಗೂ ರೇಖಾ ವಿಷ್ಯವನ್ನು ಸದನದಲ್ಲಿ ಪ್ರಸ್ತಾಪಿಸಿದ್ದರು. ಮಂಗಳವಾರ ಕಲಾಪದಲ್ಲಿ ಮಾತನಾಡಿದ ಅಗರ್ವಾಲ್, ಸಚಿನ್ ಹಾಗೂ ರೇಖಾ ರಾಜ್ಯಸಭಾ ಕಲಾಪದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದ ಮೇಲೆ ಯಾಕೆ ಅವರ ಸದಸ್ಯತ್ವ ರದ್ದು ಮಾಡಬಾರದು ಎಂದು ಪ್ರಶ್ನೆ ಮಾಡಿದ್ದರು. ವಿಜಯ್ ಮಲ್ಯರನ್ನು ರಾಜ್ಯಸಭೆಯಿಂದ ಹೊರಹಾಕಬಹುದು ಎಂದಾದ ಮೇಲೆ ರೇಖಾ, ಸಚಿನ್ ಯಾಕಿಲ್ಲ ಎಂದು ಅಗರ್ವಾಲ್ ಪ್ರಶ್ನಿಸಿದ್ದರು. ವಾಸ್ತವವಾಗಿ ರಾಜ್ಯಸಭಾ ಕಲಾಪದಲ್ಲಿ ಸಚಿನ್ ಹಾಗೂ ರೇಖಾ ಹಾಜರಾತಿ ಬಹಳ ಕಡಿಮೆ ಇದೆ. ಇದೇ ವಿವಾದಕ್ಕೆ ಕಾರಣವಾಗಿತ್ತು.

ಸಚಿನ್ ತೆಂಡೂಲ್ಕರ್ ಹಾಗೂ ರೇಖಾ ಇಬ್ಬರೂ 2012ರಲ್ಲಿ ರಾಜ್ಯಸಭೆಗೆ ನಾಮಾಂಕಿತಗೊಂಡಿದ್ದಾರೆ. ಇದಾದ ನಂತ್ರ ಸುಮಾರು 348 ದಿನಗಳಲ್ಲಿ ಸಚಿನ್ 23 ಹಾಗೂ ರೇಖಾ 18 ದಿನ ಕಲಾಪದಲ್ಲಿ ಕಾಣಿಸಿಕೊಂಡಿದ್ದಾರೆ. ಕಳೆದ ಬಜೆಟ್ ಅಧಿವೇಶನ ಜನವರಿ 31ರಿಂದ ಫೆಬ್ರವರಿ 2ರವರೆಗೆ ನಡೆದಿತ್ತು. ಆಗ ಕೂಡ ಒಂದೇ ಒಂದು ದಿನ ರೇಖಾ ಹಾಗೂ ಸಚಿನ್ ಕಾಣಿಸಿಕೊಂಡಿದ್ದರು.

Subscribe Newsletter

Get latest updates on your inbox...

Opinion Poll

  • ಕಪ್ಪು ಹಣಕ್ಕೆ ಕಡಿವಾಣ ಹಾಕುವ ಕೇಂದ್ರ ಸರ್ಕಾರದ ಪ್ರಯತ್ನ ವಿಫಲವಾಗಿದೆಯೇ..?

    View Results

    Loading ... Loading ...