alex Certify
ಕನ್ನಡ ದುನಿಯಾ       Mobile App
       

Kannada Duniya

ಸಚಿನ್ ಹೋಗ್ತಾ ಇದ್ದಂತೆ ಬದಲಾಯ್ತು ಮಸ್ಸೂರಿ ವೆದರ್

sachin-2

ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಮಸ್ಸೂರಿ ತಲುಪಿದ್ದಾರೆ. ಮುಂಬೈ ಸೆಕೆಯಿಂದ ಮುಕ್ತಿ ಪಡೆದು, ರಜೆಯನ್ನು ಎಂಜಾಯ್ ಮಾಡಲು ಅವರು ಕುಟುಂಬ ಸಮೇತ ಮಸ್ಸೂರಿಗೆ ಪ್ರಯಾಣ ಬೆಳೆಸಿದ್ದಾರೆ. ಅಂಜಲಿ ತೆಂಡೂಲ್ಕರ್ ಜೊತೆ ಡೆಹ್ರಾಡೂನ್ ನ ಜಾಲಿ ಗ್ರಾಂಟ್ ವಿಮಾನ ನಿಲ್ದಾಣದಲ್ಲಿ ಇಳಿದ ಸಚಿನ್, ಕಾರ್ ಮೂಲಕ ಮಸ್ಸೂರಿಯಲ್ಲಿರುವ ತಮ್ಮ ಸ್ನೇಹಿತ ಸಂಜಯ್ ನಾರಂಗ್ ನಿವಾಸಕ್ಕೆ ಹೋಗಿದ್ದಾರೆ.

ಸಚಿನ್ ಸುಮಾರು ಒಂದು ವಾರಗಳ ಕಾಲ ಮಸ್ಸೂರಿಯಲ್ಲಿ ಕಾಲ ಕಳೆಯಲಿದ್ದಾರೆ. ಅವರು ಬರ್ತಾ ಇರುವ ಸುದ್ದಿ ಕೇಳಿದ ಅಭಿಮಾನಿಗಳು ಸಚಿನ್ ನೋಡಲು ಕಾತರರಾಗಿದ್ದರು. ಮಸ್ಸೂರಿಗೆ ಸಚಿನ್ ಬಂದಿರುವುದು ಅಲ್ಲಿನ ವ್ಯಾಪಾರಿಗಳ ಖುಷಿಗೂ ಕಾರಣವಾಗಿದೆ. ಸಚಿನ್ ಒಂದು ವಾರ ಇಲ್ಲಿರುವುದರಿಂದ ಅಭಿಮಾನಿಗಳ ಹೆಚ್ಚಿನ ಸಂಖ್ಯೆಯಲ್ಲಿ ಸಚಿನ್ ನೋಡಲು ಮಸ್ಸೂರಿಗೆ ಬರ್ತಾರೆ. ಇದರಿಂದ ವ್ಯಾಪಾರ ಹೆಚ್ಚಾಗುತ್ತದೆ ಎಂಬ ಭರವಸೆಯಲ್ಲಿದ್ದಾರೆ ವ್ಯಾಪಾರಿಗಳು. ಸ್ಥಳೀಯ ಪೊಲೀಸರು ಸಚಿನ್ ಗೆ ಹೆಚ್ಚಿನ ಭದ್ರತೆ ಒದಗಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...