alex Certify
ಕನ್ನಡ ದುನಿಯಾ       Mobile App
       

Kannada Duniya

ಮತ್ತೆ ಒಂದಾದ್ರು ಬಾಲ್ಯ ಸ್ನೇಹಿತರು

ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅಭಿಮಾನಿಗಳಿಗೆ ಸಚಿನ್ ಬಾಲ್ಯದ ಸ್ನೇಹಿತ ಹಾಗೂ ಮಾಜಿ ಕ್ರಿಕೆಟ್ ಆಟಗಾರ ವಿನೋದ್ ಕಾಂಬ್ಳಿ ಬಗ್ಗೆ ಗೊತ್ತಿರದೆ ಇರಲು ಸಾಧ್ಯವೇಯಿಲ್ಲ. ಒಂದು ಕಾಲದಲ್ಲಿ ಆಪ್ತ ಸ್ನೇಹಿತರಾಗಿದ್ದ ಸಚಿನ್ ಹಾಗೂ ಕಾಂಬ್ಳಿ ನಡುವೆ ಮುನಿಸೊಂದು ಕಾಣಿಸಿಕೊಂಡಿತ್ತು.

1988ರಲ್ಲಿ ಸಚಿನ್ ಹಾಗೂ ವಿನೋದ್ ಕಾಂಬ್ಳಿ ಮೊದಲ ಬಾರಿ ಸುದ್ದಿಗೆ ಬಂದಿದ್ದರು. ಸ್ಕೂಲ್ ಕ್ರಿಕೆಟ್ ಪಂದ್ಯವೊಂದರಲ್ಲಿ 664 ರನ್ ಗಳಿಸಿ ಸುದ್ದಿ ಮಾಡಿದ್ದರು. ನಂತ್ರ ಉತ್ತಮ ಪ್ರದರ್ಶನದ ಮೂಲಕ ಭಾರತ ಕ್ರಿಕೆಟ್ ತಂಡ ಸೇರಿಕೊಂಡ್ರು. ಈ ಸಂದರ್ಭದಲ್ಲಿ ಉತ್ತಮ ಸ್ನೇಹಿತರಾಗಿದ್ದ ವಿನೋದ್ ಕಾಂಬ್ಳಿ ಹಾಗೂ ಸಚಿನ್ ನಿಧಾನವಾಗಿ ದೂರವಾಗತೊಡಗಿದ್ರು.

ಸಚಿನ್ ಕ್ರಿಕೆಟ್ ನಲ್ಲಿ ದಾಖಲೆ ಮೇಲೆ ದಾಖಲೆ ಬರೆದ್ರೆ ವಿನೋದ್ ಕಾಂಬ್ಳಿ ಹಿಂದೆ ಬಿದ್ರು. ಸುಮಾರು 8 ವರ್ಷಗಳ ಹಿಂದೆ ಮಾಧ್ಯಮವೊಂದರಲ್ಲಿ ಮಾತನಾಡಿದ್ದ ಕಾಂಬ್ಳಿ, ಸಚಿನ್ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಕಷ್ಟದ ಕಾಲದಲ್ಲಿ ಸಚಿನ್ ಕೈ ಹಿಡಿಯಲಿಲ್ಲ ಎಂದಿದ್ದರು. ಅದಾನ ನಂತ್ರ ಸಚಿನ್ ಹಾಗೂ ಕಾಂಬ್ಳಿ ನಡುವಿನ ಅಂತರ ಮತ್ತಷ್ಟು ಹೆಚ್ಚಾಯ್ತು. ಸಚಿನ್ ವಿದಾಯದ ಪಂದ್ಯದಲ್ಲಿ ಕಾಂಬ್ಳಿಗೆ ಆಹ್ವಾನ ನೀಡಲಿಲ್ಲ. ಸಚಿನ್ ಸಿನಿಮಾದಲ್ಲಿ ವಿನೋದ್ ಕಾಂಬ್ಳಿ  ಕಾಣಿಸಿಕೊಳ್ಳಲಿಲ್ಲ. ಈ ಎಲ್ಲ ಬೆಳವಣಿಗೆ ನೋಡಿದ ಅಭಿಮಾನಿಗಳ ಕುಚುಕು ಗೆಳೆಯರೂ ಸಂಪೂರ್ಣವಾಗಿ ದೂರವಾದ್ರು ಎಂದುಕೊಂಡಿದ್ರು.

ಆದ್ರೆ ಇತ್ತೀಚೆಗೆ ಮುಂಬೈನಲ್ಲಿ ನಡೆದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಟ್ವೀಟರ್ ನಲ್ಲಿ ಸಚಿನ್ ಜೊತೆ ಇರುವ ಫೋಟೋ ಪೋಸ್ಟ್ ಮಾಡಿರುವ ಕಾಂಬ್ಳಿ ತುಂಬಾ ಖುಷಿಯಾಗಿದ್ದಾರೆ. ಐ ಲವ್ ಯು ಮಾಸ್ಟರ್ ಬ್ಲಾಸ್ಟರ್ ಎಂದು ಟ್ವಿಟ್ ಮಾಡಿರುವ ಕಾಂಬ್ಳಿ ನಮ್ಮಿಬ್ಬರ ಮೊದಲ ಸೆಲ್ಫಿ ಎಂದು ಒಂದು ಫೋಟೋ ಹಾಕಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...