alex Certify
ಕನ್ನಡ ದುನಿಯಾ       Mobile App
       

Kannada Duniya

ಸಂಪೂರ್ಣ ವೇತನವನ್ನು ಪ್ರಧಾನ ಮಂತ್ರಿ ಪರಿಹಾರ ನಿಧಿಗೆ ಅರ್ಪಿಸಿದ ಸಚಿನ್

ರಾಜ್ಯಸಭೆಗೆ ನಾಮನಿರ್ದೇಶನಗೊಂಡಿದ್ದ ಕ್ರಿಕೆಟ್ ಜಗತ್ತಿನ ದಂತ ಕಥೆ ಸಚಿನ್ ತೆಂಡೂಲ್ಕರ್ ತಾವು ಇದುವರೆಗೂ ಪಡೆದುಕೊಂಡಿದ್ದ ವೇತನ ಹಾಗೂ ಭತ್ಯೆಯನ್ನು ಪ್ರಧಾನ ಮಂತ್ರಿ ಪರಿಹಾರ ನಿಧಿಗೆ ಅರ್ಪಿಸಿದ್ದಾರೆ.

2012 ರಲ್ಲಿ ಸಚಿನ್ ತೆಂಡೂಲ್ಕರ್ ಆರು ವರ್ಷಗಳ ಅವಧಿಗೆ ರಾಜ್ಯಸಭಾ ಸದಸ್ಯರಾಗಿ ನಾಮ ನಿರ್ದೇಶನಗೊಂಡಿದ್ದು, ಅವರಿಗೆ 90 ಲಕ್ಷ ರೂ. ವೇತನ ಹಾಗೂ ಇತರೆ ಭತ್ಯೆ ಲಭ್ಯವಾಗಿತ್ತು. ಇದಿಷ್ಟೂ ಹಣವನ್ನು ಪ್ರಧಾನ ಮಂತ್ರಿ ಪರಿಹಾರ ನಿಧಿಗೆ ಸಲ್ಲಿಸುವ ಮೂಲಕ ಸಚಿನ್ ಮಾದರಿಯಾಗಿದ್ದಾರೆ.

ರಾಜ್ಯಸಭಾ ಸದಸ್ಯರಾಗಿದ್ದ ಸಚಿನ್ ತೆಂಡೂಲ್ಕರ್ ಕಲಾಪಗಳಿಗೆ ಗೈರು ಹಾಜರಾಗಿದ್ದೇ ಹೆಚ್ಚು. ರಾಜ್ಯಸಭೆಯ 400 ಕಲಾಪಗಳ ಪೈಕಿ ಸಚಿನ್ ಪಾಲ್ಗೊಂಡಿದ್ದು, ಕೇವಲ 29 ಕಲಾಪಗಳಲ್ಲಿ ಮಾತ್ರ. ಈ ವೇಳೆ ಸಚಿನ್ 22 ಪ್ರಶ್ನೆಗಳನ್ನು ಕೇಳಿದ್ದು, ಯಾವುದೇ ಬಿಲ್ ಮಂಡಿಸಿರಲಿಲ್ಲ. ಸಚಿನ್ ಗೈರು ಹಾಜರಿ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನೆ ಕೇಳಿ ಬಂದಿತ್ತು. ಆದರೆ ಸಚಿನ್, ತಮ್ಮ ರಾಜ್ಯಸಭಾ ಸದಸ್ಯರ ನಿಧಿಯನ್ನು ಸಮರ್ಪಕವಾಗಿ ಬಳಸಿಕೊಂಡಿದ್ದು, ಆಂಧ್ರಪ್ರದೇಶದ ಪುಟ್ಟಂರಾಜು ಕಂಡ್ರಿಗಾ ಹಾಗೂ ಮಹಾರಾಷ್ಟ್ರದ ಡೊಂಜಾ ಗ್ರಾಮದ ಅಭಿವೃದ್ದಿಗೆ ಬಳಸಿಕೊಂಡಿದ್ದರು. ಇದೀಗ ಸಚಿನ್ ತೆಂಡೂಲ್ಕರ್ ತಮ್ಮ ಸಂಪೂರ್ಣ ವೇತನವನ್ನು ಪ್ರಧಾನ ಮಂತ್ರಿ ಪರಿಹಾರ ನಿಧಿಗೆ ಸಮರ್ಪಿಸಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಸಚಿನ್ ರನ್ನು ಶ್ಲಾಘಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...