alex Certify
ಕನ್ನಡ ದುನಿಯಾ       Mobile App
       

Kannada Duniya

ಸಚಿನ್ ಪುತ್ರಿ ಹಿಂದೆ ಬಿದ್ದಿದ್ದ ವ್ಯಕ್ತಿಯ ಶಾಕಿಂಗ್ ಹೇಳಿಕೆ

ಸಚಿನ್ ತೆಂಡೂಲ್ಕರ್ ಪುತ್ರಿ ಸಾರಾ ತೆಂಡೂಲ್ಕರ್ ಹಿಂದೆ ಬಿದ್ದಿದ್ದ ಮಾನಸಿಕ ಅಸ್ವಸ್ಥನಾಗಿರೋ ಮಧ್ಯವಯಸ್ಕನನ್ನು ಪಶ್ಚಿಮ ಬಂಗಾಳದಲ್ಲಿ ಪೊಲೀಸರು ಬಂಧಿಸಿದ್ದಾರೆ. ಬಹಳ ದಿನಗಳಿಂದ ತಾನು ಸಾರಾ ಮೇಲೆ ಕಣ್ಣಿಟ್ಟಿರೋದಾಗಿ ಆತ ಹೇಳಿಕೊಂಡಿದ್ದಾನೆ.

ದೇಬ್ ಕುಮಾರ್ ಮೈತಿ ಹೆಸರಿನ ಈತ ಹಲವು ಬಾರಿ ಸಚಿನ್ ನಿವಾಸಕ್ಕೆ ಕರೆ ಮಾಡಿದ್ದ. ಸಾರಾ ಜೊತೆಗೆ ಅಸಭ್ಯವಾಗಿ ಮಾತನಾಡಿದ್ದ, ಅಷ್ಟೇ ಅಲ್ಲ ಆಕೆಗೆ ಪ್ರಪೋಸ್ ಕೂಡ ಮಾಡಿದ್ದ. ಮದುವೆ ಪ್ರಪೋಸಲ್ ಒಪ್ಪದೇ ಇದ್ರೆ ಕಿಡ್ನಾಪ್ ಮಾಡುವುದಾಗಿ ಬೆದರಿಕೆ ಹಾಕಿದ್ದ.

ಆಕೆ ಕೇವಲ ನನ್ನವಳು, ನನ್ನನ್ನೇ ಮದುವೆಯಾಗಬೇಕು.  ಬೇರೆ ಯಾರನ್ನೂ ಮದುವೆಯಾಗಲು ಬಿಡುವುದಿಲ್ಲ ಅಂತೆಲ್ಲಾ ಪೊಲೀಸರ ಬಳಿ ಬಡಬಡಿಸಿದ್ದಾನೆ. ಬಹಳ ಬಾರಿ ಅವಳನ್ನು ಹಿಂಬಾಲಿಸಿ ಹೋಗಿದ್ದೇನೆ ಅಂತಾ ಒಪ್ಪಿಕೊಂಡಿದ್ದಾನೆ. ಆತನ ಸೆಲ್ ಫೋನ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕೋರ್ಟ್ ಅವನನ್ನು ಜನವರಿ 11ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ. ವೃತ್ತಿಯಲ್ಲಿ ಪೇಂಟರ್ ಆಗಿದ್ದ ದೇಬ್ ಕುಮಾರ್ ಖಿನ್ನತೆಯಿಂದ ಬಳಲುತ್ತಿದ್ದ. ಎಷ್ಟು ಬಾರಿ ಈತ ತೆಂಡೂಲ್ಕರ್ ಮನೆಗೆ ಕರೆ ಮಾಡಿದ್ದಾನೆ ಅನ್ನೋ ವಿವರ ಇನ್ನೂ ಲಭ್ಯವಾಗಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...