alex Certify
ಕನ್ನಡ ದುನಿಯಾ       Mobile App
       

Kannada Duniya

ಸಚಿನ್-ಕಾಂಬ್ಳಿ ಮತ್ತು ಲಕ್ಕಿ ನಂಬರ್ 24….

ಕ್ರಿಕೆಟ್ ಒಂದು ಧರ್ಮವೆಂದು, ಸಚಿನ್ ತೆಂಡೂಲ್ಕರ್ ದೇವರೆಂದು ಭಾರತದಲ್ಲಿ ಕೋಟ್ಯಾಂತರ ಮಂದಿ ಆರಾಧಿಸ್ತಾರೆ. 24 ವರ್ಷಗಳ ಕಾಲ ಕ್ರಿಕೆಟ್ ಜಗತ್ತಿನಲ್ಲಿ ಮೆರೆದಾಡಿದ ವಾಮನಮೂರ್ತಿ ಸಚಿನ್. 90ರ ದಶಕದಲ್ಲಿ ಸಚಿನ್ ಟೀಂ ಇಂಡಿಯಾದ ಬೆನ್ನೆಲುಬಾಗಿದ್ದರು.

1989 ರ ನವೆಂಬರ್ 15 ರಂದು ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಸಚಿನ್ ಪದಾರ್ಪಣೆ ಮಾಡಿದ್ದರು. ವಾಂಖೆಡೆ ಮೈದಾನದಲ್ಲಿ 200ನೇ ಟೆಸ್ಟ್ ಪಂದ್ಯ ಆಡಿದ ಸಚಿನ್, ಅತಿ ಹೆಚ್ಚು ಟೆಸ್ಟ್ ಆಡಿದ ಮೊದಲ ಭಾರತೀಯ ಕ್ರಿಕೆಟರ್ ಎನಿಸಿಕೊಂಡಿದ್ದರು.

ಸಚಿನ್ ನಿವೃತ್ತಿ ಹೊಂದಿದ ದಿನವಂತೂ ಅಭಿಮಾನಿಗಳೆಲ್ಲ ಕಣ್ಣೀರಾಗಿದ್ದರು. ಖುದ್ದು ಸಚಿನ್ ಕೂಡ ಭಾವುಕರಾಗಿದ್ದರು. ಸಚಿನ್ ಕ್ರಿಕೆಟ್ ಬದುಕಿನಲ್ಲಿ 24 ಅನ್ನೋ ಅಂಕಿಗೆ ವಿಶೇಷ ಸ್ಥಾನಮಾನವಿದೆ. ಅದ್ಹೇಗೆ ಅನ್ನೋದನ್ನು ಅಭಿಮಾನಿಯೊಬ್ಬ ಪ್ರಕಟಿಸಿದ್ದಾನೆ.

24 ಸಚಿನ್ ಗೆ ಯಾಕೆ ಲಕ್ಕಿ ನಂಬರ್ ಅನ್ನೋದನ್ನು ವಿವರಿಸಿದ್ದಾನೆ. ಈ ಟ್ವೀಟ್ ಗೆ ಸಚಿನ್ ಕೂಡ ಪ್ರತಿಕ್ರಿಯಿಸಿದ್ದಾರೆ. ಈವರೆಗೆ ನಾನು ಕೂಡ ಇದನ್ನು ಗಮನಿಸಿರಲಿಲ್ಲ, 24 ನಿಜಕ್ಕೂ ನನಗೆ ಅದೃಷ್ಟದ ಸಂಖ್ಯೆ ಅಂತಾ ಟ್ಟೀಟ್ ಮಾಡಿದ್ದಾರೆ.

ಸಚಿನ್ ಹುಟ್ಟಿದ್ದು 1973 ರ ಎಪ್ರಿಲ್ 24ರಂದು. 1988ರ ಫೆಬ್ರವರಿ 24 ರಂದು ಸಚಿನ್ ಹಾಗೂ ಸ್ನೇಹಿತ ವಿನೋದ್ ಕಾಂಬ್ಳಿ ಹೆಸರು ದಾಖಲೆಯ ಪುಟ ಸೇರಿತ್ತು. ಸ್ಕೂಲ್ ಕ್ರಿಕೆಟ್ ನಲ್ಲಿ ಈ ಜೋಡಿ 664 ರನ್ ಗಳ ಪಾಲುದಾರಿಕೆ ಮಾಡಿದ್ದರು. ಹಾಗಾಗಿ ಇಬ್ಬರಿಗೂ 24 ಅದೃಷ್ಟದ ಸಂಖ್ಯೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...