alex Certify
ಕನ್ನಡ ದುನಿಯಾ       Mobile App
       

Kannada Duniya

ಬಾಲ್ಯದ ಗೆಳೆಯನ ಬರ್ತಡೇಯಲ್ಲಿ ಸಂಭ್ರಮಿಸಿದ ಸಚಿನ್

ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ತಮ್ಮ ಬಾಲ್ಯದ ಗೆಳೆಯ ಹಾಗೂ ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಅವರ ಬರ್ತಡೇ ಪಾರ್ಟಿಯಲ್ಲಿ ಪಾಲ್ಗೊಂಡು ಸಂಭ್ರಮಿಸಿದ್ದಾರೆ.

ವಿನೋದ್ ಕಾಂಬ್ಳಿ ಮತ್ತು ಸಚಿನ್ ತೆಂಡೂಲ್ಕರ್ ಬಾಲ್ಯದ ದಿನಗಳಿಂದಲೂ ಗೆಳೆಯರಾಗಿದ್ದು, ಒಟ್ಟಿಗೆ ಭಾರತ ಕ್ರಿಕೆಟ್ ತಂಡದಲ್ಲಿ ಆಡಿದ್ದಾರೆ. ಮುಂಬೈನ ಎಂ.ಸಿ.ಎ.ನಲ್ಲಿ ನಡೆದ ಕಾಂಬ್ಳಿ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಸಚಿನ್ ಪಾಲ್ಗೊಂಡಿದ್ದು, ಕಾಂಬ್ಳಿ ಅವರ ತಲೆಗೆ ಕೇಕ್ ಹಚ್ಚಿ ಗೆಳೆಯರೆಲ್ಲಾ ಎಂಜಾಯ್ ಮಾಡಿದ್ದಾರೆ.

ಗೆಳೆಯರೆಲ್ಲಾ ಸೇರಿ ಕಾಂಬ್ಳಿ ಬರ್ತಡೇ ಪಾರ್ಟಿ ಆಚರಿಸಿದ್ದಾರೆ. ಸಚಿನ್ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿಯೂ ತಮ್ಮ ಬಾಲ್ಯದ ಗೆಳೆಯನಿಗೆ ಶುಭಾಶಯ ಹೇಳಿದ್ದಾರೆ. ವಿನೋದ್ ಕಾಂಬ್ಳಿ ಕೂಡ ಗೆಳೆಯರೊಂದಿಗೆ ಸಂಭ್ರಮಿಸಿದ ಕ್ಷಣಗಳನ್ನು ಹಂಚಿಕೊಂಡಿದ್ದಾರೆ.

ವಿನೋದ್ ಕಾಂಬ್ಳಿ 17 ಟೆಸ್ಟ್ ಪಂದ್ಯಗಳನ್ನಾಡಿದ್ದು, 4 ಶತಕ ಗಳಿಸಿದ್ದಾರೆ. ಇದರಲ್ಲಿ 2 ದ್ವಿಶತಕ ಸೇರಿವೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...