alex Certify
ಕನ್ನಡ ದುನಿಯಾ       Mobile App
       

Kannada Duniya

ಟಿ20 ಮುಂಬೈ ಲೀಗ್ ಗೆ ಸಚಿನ್ ಬ್ರಾಂಡ್ ಅಂಬಾಸಿಡರ್

ಮುಂಬೈ ಕ್ರಿಕೆಟ್ ಅಸೋಸಿಯೇಷನ್ ನೇತೃತ್ವದಲ್ಲಿ ಮುಂಬರುವ ಮಾರ್ಚ್ ತಿಂಗಳಿನಲ್ಲಿ ಟಿ20 ಮುಂಬೈ ಕ್ರಿಕೆಟ್ ಲೀಗ್ ನಡೆಯಲಿದ್ದು, ಇದಕ್ಕೆ ರಾಯಭಾರಿಯನ್ನಾಗಿ ಕ್ರಿಕೆಟ್ ದಂತ ಕಥೆ ಸಚಿನ್ ತೆಂಡೂಲ್ಕರ್ ಅವರನ್ನು ನೇಮಕ ಮಾಡಲಾಗಿದೆ.

ಮುಂಬೈನ ಆರು ವಿಭಾಗಗಳಿಂದ ಒಟ್ಟು ಆರು ತಂಡಗಳು ಈ ಟೂರ್ನಿಯಲ್ಲಿ ಭಾಗವಹಿಸಲಿದ್ದು, ಮುಂಬೈ ನಾರ್ತ್, ಮುಂಬೈ ಸೌತ್, ಮುಂಬೈ ನಾರ್ತ್ ವೆಸ್ಟ್, ಮುಂಬೈ ನಾರ್ತ್ ಈಸ್ಟ್, ಮುಂಬೈ ನಾರ್ತ್ ಸೆಂಟ್ರಲ್ ಹಾಗೂ ಮುಂಬೈ ಸೌತ್ ಸೆಂಟ್ರಲ್ ಎಂದು ವಿಂಗಡಿಸಲಾಗಿದೆ.

ತಮ್ಮನ್ನು ಟಿ20 ಮುಂಬೈ ಕ್ರಿಕೆಟ್ ಲೀಗ್ ಗೆ ರಾಯಭಾರಿಯನ್ನಾಗಿ ನೇಮಕ ಮಾಡಿರುವುದಕ್ಕೆ ಸಂತಸ ವ್ಯಕ್ತಪಡಿಸಿರುವ ಸಚಿನ್ ತೆಂಡೂಲ್ಕರ್, ಇದಕ್ಕಾಗಿ ಮುಂಬೈ ಕ್ರಿಕೆಟ್ ಅಸೋಸಿಯೇಷನ್ ಗೆ ಅಭಾರಿಯಾಗಿದ್ದೇನೆ ಎಂದಿದ್ದಾರೆ. ಈ ಪಂದ್ಯಾವಳಿಯ ಮೂಲಕ ಯುವ ಪ್ರತಿಭೆಗಳನ್ನು ಗುರುತಿಸುವ ಕಾರ್ಯವೂ ನಡೆಯುತ್ತದೆ ಎಂದು ಸಚಿನ್ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...