alex Certify
ಕನ್ನಡ ದುನಿಯಾ       Mobile App
       

Kannada Duniya

ಅಂದು ಬಿಕ್ಕಿ-ಬಿಕ್ಕಿ ಸಚಿನ್ ತೆಂಡೂಲ್ಕರ್ ಅತ್ತಿದ್ದೇಕೆ ?

images

ಮನುಷ್ಯ ಎಷ್ಟೇ ಹೆಸರು ಮಾಡಿರಲಿ ಇಲ್ಲ ಶ್ರೀಮಂತನಾಗಿರಲಿ. ಕೆಲವೊಂದು ಭಾವನಾತ್ಮಕ ವಿಚಾರಗಳು ಆತನನ್ನು ಕಟ್ಟಿ ಹಾಕುತ್ತವೆ. ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಕೂಡ ಇದರಿಂದ ಹೊರತಾಗಿಲ್ಲ. ಮಗನ ವಿಚಾರಕ್ಕೆ ಸಂಬಂಧಿಸಿದಂತೆ ಸಚಿನ್ ತೆಂಡೂಲ್ಕರ್ ಬಿಕ್ಕಿ ಬಿಕ್ಕಿ ಅತ್ತಿದ್ದರಂತೆ.

ಕ್ರಿಕೆಟ್ ದೇವರು ಎಂದೇ ಹೆಸರಾದ ಸಚಿನ್ ತೆಂಡೂಲ್ಕರ್ ಪಂದ್ಯದ ಹಿನ್ನೆಲೆಯಲ್ಲಿ ದೇಶ-ವಿದೇಶಗಳನ್ನು ಸುತ್ತಿದ್ದಾರೆ. ತಿಂಗಳುಗಳ ಕಾಲ ಕುಟುಂಬಸ್ಥರು,ಮಕ್ಕಳ ಮುಖವನ್ನು ನೋಡಿಲ್ಲ. ಆದ್ರೆ ಮಗ ಅರ್ಜುನ್ 9 ತಿಂಗಳಿನಲ್ಲಿರುವಾಗ ಆತನನ್ನು ಮನೆಯಲ್ಲಿಯೇ ಬಿಟ್ಟು ಜರ್ಮನಿಗೆ ಹೋಗಿದ್ದ ಸಚಿನ್ ವಾಪಸ್ ಬಂದ ಮೇಲೆ ಬಿಕ್ಕಿ ಬಿಕ್ಕಿ ಅತ್ತಿದ್ದಾರಂತೆ.

ಅರ್ಜುನ್ ನೋಡಿಕೊಳ್ಳುವುದರಲ್ಲಿಯೇ ಪತ್ನಿ ಅಂಜಲಿ ಕಾಲ ಕಳೆಯುತ್ತಿದ್ದಾರೆ. ಹೊರಗೆಲ್ಲೂ ಹೋಗಿಲ್ಲ ಎನ್ನುವ ಕಾರಣಕ್ಕೆ ಸಚಿನ್ ಅಂಜಲಿ ಜೊತೆ ಜರ್ಮನಿಗೆ ಹೋಗಲು ಮುಂದಾಗಿದ್ದಾರೆ. ಇದಕ್ಕೆ ಅಂಜಲಿ ಕೂಡ ಒಪ್ಪಿದ್ದರಂತೆ. ಮಗ 9 ತಿಂಗಳ ಅರ್ಜುನ್ ನನ್ನು ಅಜ್ಜ-ಅಜ್ಜಿ ಜೊತೆ ಬಿಟ್ಟು ಹೋಗಿದ್ದಾರೆ. ಆದ್ರೆ ಜರ್ಮನಿ ತಲುಪ್ತಿದ್ದಂತೆ ಫೋನ್ ಬಂದಿದೆ. ತಕ್ಷಣ ಸಚಿನ್-ಅಂಜಲಿ ವಾಪಸ್ಸಾಗಿದ್ದಾರೆ.

ಮನೆಗೆ ಬಂದು ನೋಡಿದ್ರೆ ಮಗ ಜ್ವರದಿಂದ ಬಳಲುತ್ತಿದ್ದನಂತೆ. ಅಜ್ಜಿಗೂ ಜ್ವರ ಕಾಣಿಸಿಕೊಂಡಿತ್ತಂತೆ. ಇದನ್ನು ನೋಡಿ ಅಪ್ಪನಾದ ಸಚಿನ್ ಮನಸ್ಸು ಕರಗಿದೆ. ಅಂಜಲಿ ತಬ್ಬಿಕೊಂಡು ಒಂದೇ ಸಮನೆ ಅತ್ತಿದ್ದಾರಂತೆ ಸಚಿನ್.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...