alex Certify
ಕನ್ನಡ ದುನಿಯಾ       Mobile App
       

Kannada Duniya

ಬೈಕ್ ಸವಾರನಿಗೆ ಬುದ್ದಿ ಹೇಳಿದ ಸಚಿನ್

sachin_1491716618_749x421

ಕ್ರಿಕೆಟ್ ದೇವರು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಕೇವಲ ಮೈದಾನದಲ್ಲಿ ಮಾತ್ರವಲ್ಲ ಮೈದಾನದ ಹೊರಗೂ ತಮ್ಮ ವರ್ತನೆಯಿಂದ ಹೆಸರು ಪಡೆದವರು. ಸಚಿನ್ ಅಭಿಮಾನಿಗಳ ಜೊತೆ ವರ್ತಿಸುವ ರೀತಿ ಎಲ್ಲರ ಮೆಚ್ಚುಗೆ ಗಳಿಸಿದೆ.  ಸಚಿನ್ ರವಿವಾರ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಅದ್ರಲ್ಲಿ ಇಬ್ಬರು ಬೈಕ್ ಸವಾರರಿಗೆ ಸಲಹೆ ನೀಡಿದ್ದಾರೆ ಸಚಿನ್.

ಸಚಿನ್ ಕಾರಿನಲ್ಲಿ ಹೋಗ್ತಿರುವ ವಿಡಿಯೋ ಅದು. ಸಿಗ್ನಲ್ ನಲ್ಲಿ ಕಾರ್ ನಿಂತಾಗ ಬೈಕ್ ಸವಾರನೊಬ್ಬ ಸಚಿನ್ ಜೊತೆ ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿದ್ದಾನೆ. ಆಗ ಸಚಿನ್ ಆತನಿಗೆ ಹೆಲ್ಮೆಟ್ ಧರಿಸುವಂತೆ ಸಲಹೆ ನೀಡಿದ್ದಾರೆ. ಮುಂದಿನ ಬಾರಿ ಹೆಲ್ಮೆಟ್ ಧರಿಸ್ತೇನೆಂದು ಪ್ರಮಾಣ ಮಾಡು ಎಂದಿದ್ದಾರೆ ಸಚಿನ್. ಇದು ನಿನಗೆ ಅಪಾಯಕಾರಿಯಾಗಬಹುದು. ಜೀವ ಬಹಳ ಅಮೂಲ್ಯವಾದದ್ದು ಎಂದಿದ್ದಾರೆ. ಹಿಂದೆ ಬಂದ ಇನ್ನೊಬ್ಬ ಬೈಕ್ ಸವಾರನಿಗೆ ಕೂಡ ಹೆಲ್ಮೆಟ್ ಧರಿಸು ಭಾಯಿ ಎಂದಿದ್ದಾರೆ.

ಸದ್ಯ ‘ಸಚಿನ್: ಎ ಬಿಲಿಯನ್ ಡ್ರೀಮ್ಸ್’ ಚಿತ್ರ ಚರ್ಚೆಯಲ್ಲಿದೆ. ಇದ್ರ ಜೊತೆಗೆ ಸಚಿನ್ ಒಂದು ಹಾಡನ್ನು ಸೋನು ನಿಗಮ್ ಜೊತೆ ಹಾಡಿದ್ದು, ಅಭಿಮಾನಿಗಳ ಮನಗೆದ್ದಿದೆ. ಸಚಿನ್ 30 ಆಟಗಾರರ ಹೆಸರನ್ನು ಹಾಡಿನಲ್ಲಿ ಬಳಸಿಕೊಂಡಿದ್ದಾರೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...