alex Certify
ಕನ್ನಡ ದುನಿಯಾ       Mobile App
       

Kannada Duniya

ಸಲ್ಮಾನ್ ಗೆ ಸಾಥ್ ನೀಡಲಿದ್ದಾರೆ ಸಚಿನ್, ಬಿಂದ್ರಾ

Sachin-tendulkar-146ರಿಯೋ ಒಲಂಪಿಕ್ಸ್ ನಲ್ಲಿ ಭಾರತ ತಂಡದ ರಾಯಭಾರಿಯನ್ನಾಗಿ ಖ್ಯಾತ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರನ್ನು ಭಾರತೀಯ ಒಲಂಪಿಕ್ಸ್ ಸಂಸ್ಥೆ ನೇಮಕ ಮಾಡಿದ್ದಕ್ಕೆ ಮಿಲ್ಕಾ ಸಿಂಗ್, ಯೋಗೇಶ್ವರ್ ದತ್ ಸೇರಿದಂತೆ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದರು.

ಇದೀಗ ಒಲಂಪಿಕ್ ಸಂಸ್ಥೆ, ಖ್ಯಾತ ಕ್ರಿಕೆಟ್ ಆಟಗಾರ ಸಚಿನ್ ತೆಂಡೂಲ್ಕರ್ ಹಾಗೂ ಶೂಟರ್ ಅಭಿನವ್ ಬಿಂದ್ರಾರನ್ನು ಸಲ್ಮಾನ್ ಜೊತೆಗೆ ಭಾರತದ ರಾಯಭಾರಿಗಳೆಂದು ಘೋಷಿಸಿದೆ. ಈ ಕುರಿತು ಮಾತನಾಡಿದ ಭಾರತೀಯ ಒಲಂಪಿಕ್ಸ್ ಸಂಸ್ಥೆ ಮುಖ್ಯ ಕಾರ್ಯದರ್ಶಿ ರಾಜೀವ್ ಮೆಹ್ತಾ, ಇಬ್ಬರೂ ಆಟಗಾರರೂ ಸಂಸ್ಥೆಯ ಆಹ್ವಾನವನ್ನು ಒಪ್ಪಿಕೊಂಡಿದ್ದಾರೆಂದು ತಿಳಿಸಿದ್ದಾರೆ.

ಖ್ಯಾತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಅವರನ್ನೂ ರಾಯಭಾರಿಯನ್ನಾಗಿಸಲು ಸಂಸ್ಥೆ ಮುಂದಾಗಿದ್ದು, ಅವರಿಂದ ಇನ್ನೂ ಪ್ರತಿಕ್ರಿಯೆ ಬರಬೇಕಿದೆ ಎಂದು ಹೇಳಿದ ರಾಜೀವ್ ಮೆಹ್ತಾ, ಭಾರತೀಯ ಒಲಂಪಿಕ್ಸ್ ಸಂಸ್ಥೆ ಆಹ್ವಾನವನ್ನು ಅವರು ಒಪ್ಪಿಕೊಳ್ಳುವ ಭರವಸೆಯಿದೆ ಎಂದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...