alex Certify
ಕನ್ನಡ ದುನಿಯಾ       Mobile App
       

Kannada Duniya

ಹೈಕೋರ್ಟ್ ಮೊರೆ ಹೋದ ಶ್ರೀಶಾಂತ್

srti

ಕೊಚ್ಚಿ: ಮ್ಯಾಚ್ ಫಿಕ್ಸಿಂಗ್ ಆರೋಪದಿಂದ ಮುಕ್ತರಾಗಿರುವ ಕ್ರಿಕೆಟಿಗ ಎಸ್. ಶ್ರೀಶಾಂತ್ ಮತ್ತೆ ಭಾರತ ತಂಡಕ್ಕೆ ಮರಳುವ ವಿಶ್ವಾಸದಲ್ಲಿದ್ದಾರೆ.

2013 ರ ಐ.ಪಿ.ಎಲ್. ಟೂರ್ನಿಯಲ್ಲಿ ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲಿ ಭಾಗಿಯಾಗಿದ್ದರೆಂಬ ಕಾರಣಕ್ಕೆ ಶ್ರೀಶಾಂತ್ ಅವರ ಮೇಲೆ ಅಜೀವ ನಿಷೇಧ ಹೇರಲಾಗಿತ್ತು.

ಆರೋಪ ಮುಕ್ತರಾದ ನಂತರವೂ ಶ್ರೀಶಾಂತ್ ಮೇಲೆ ಹೇರಿದ್ದ ಅಜೀವ ನಿಷೇಧವನ್ನು ಬಿ.ಸಿ.ಸಿ.ಐ. ತೆರವುಗೊಳಿಸಿರಲಿಲ್ಲ.

ಬಿ.ಸಿ.ಸಿ.ಐ. ವಿರುದ್ಧ ಶ್ರೀಶಾಂತ್ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿ ಜಯ ಪಡೆದುಕೊಂಡಿದ್ದರೂ, ಬಿ.ಸಿ.ಸಿ.ಐ. ಮಾತ್ರ ಹೈಕೋರ್ಟ್ ತೀರ್ಪಿನ ಮರು ಪರಿಶೀಲನೆಗೆ ಮೇಲ್ಮನವಿ ಸಲ್ಲಿಸಿದೆ.

ಶ್ರೀಶಾಂತ್ ಮುಂದಿನ ತಿಂಗಳು ಸ್ಕಾಟ್ಲೆಂಡ್ ನಲ್ಲಿ ನಡೆಯಲಿರುವ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಆಡಲು ಉತ್ಸುಕರಾಗಿದ್ದಾರೆ.

ಅಲ್ಲಿ ಆಡಲು ನಿರಾಕ್ಷೇಪಣ ಪತ್ರ ನೀಡುವಂತೆ ಬಿ.ಸಿ.ಸಿ.ಐ.ಗೆ ಸೂಚನೆ ನೀಡಲು ಹೈಕೋರ್ಟ್ ಮೊರೆ ಹೋಗಿದ್ದಾರೆ.

ಕೇರಳ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿರುವ ಶ್ರೀಶಾಂತ್, ಸ್ಕಾಟ್ಲೆಂಡ್ ನಲ್ಲಿ ಕ್ರಿಕೆಟ್ ಆಡಲು ನಿಗದಿತ ಸಮಯದೊಳಗೆ ಅನುಮತಿ ನೀಡಲು ಬಿ.ಸಿ.ಸಿ.ಐ.ಗೆ ಸೂಚಿಸಬೇಕೆಂದು ಮನವಿ ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...