alex Certify
ಕನ್ನಡ ದುನಿಯಾ       Mobile App
       

Kannada Duniya

ಮತ್ತೆ ನಿರಾಸೆ ಮೂಡಿಸಿದ ಆರ್.ಸಿ.ಬಿ.

virat-rcb

ಬೆಂಗಳೂರು: ಸತತ ಸೋಲಿನಿಂದ ಕಂಗೆಟ್ಟಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮತ್ತೊಮ್ಮೆ ಮುಖಭಂಗ ಅನುಭವಿಸಿದೆ.

ಇಲ್ಲಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಿಂಗ್ಸ್ ಇಲೆವನ್ ಪಂಜಾಬ್ ವಿರುದ್ಧ ನಡೆದ ಐ.ಪಿ.ಎಲ್. ಪಂದ್ಯದಲ್ಲಿ ಆರ್.ಸಿ.ಬಿ. 19 ರನ್ ಗಳಿಂದ ಸೋಲು ಕಂಡಿದೆ.

ಮೊದಲಿಗೆ ಬ್ಯಾಟಿಂಗ್ ಮಾಡಿದ ಪಂಜಾಬ್ ತಂಡ ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 138 ರನ್ ಗಳಿಸಿತು. ಶಾನ್ ಮಾರ್ಷ್ 20, ಮನನ್ ವೊರಾ 25, ವೃದ್ಧಿಮಾನ್ ಸಹಾ 21, ಅಕ್ಷರ್ ಪಟೇಲ್ ಅಜೇಯ 38 ರನ್ ಗಳಿಸಿದ್ದಾರೆ.

ಆರ್.ಸಿ.ಬಿ. ಪರವಾಗಿ ಅನಿಕೇತ್ ಚೌಧರಿ 2, ಯಜುವೇಂದ್ರ ಚಾಹಲ್ 2, ಅರವಿಂದ್, ಶೇನ್ ವ್ಯಾಟ್ಸನ್, ಪವನ್ ನೇಗಿ ತಲಾ 1 ವಿಕೆಟ್ ಪಡೆದರು.

139 ರನ್ ಗೆಲುವಿನ ಗುರಿ ಬೆನ್ನತ್ತಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು 19 ಓವರ್ ಗಳಲ್ಲಿ 119 ರನ್ ಗಳಿಸಿ 19 ರನ್ ಗಳಿಂದ ಸೋಲು ಕಂಡಿತು. ಮನ್ ದೀಪ್ ಸಿಂಗ್ 46, ಪವನ್ ನೇಗಿ 21 ಹೊರತುಪಡಿಸಿ ಉಳಿದವರಿಂದ ನಿರೀಕ್ಷಿತ ಪ್ರದರ್ಶನ ಬರಲಿಲ್ಲ. ಪಂಜಾಬ್ ಪರ ಸಂದೀಪ್ ಶರ್ಮ, ಅಕ್ಷರ್ ಪಟೇಲ್ ತಲಾ 3 ವಿಕೆಟ್, ಮೋಹಿತ್ ಶರ್ಮ 2 ವಿಕೆಟ್ ಪಡೆದರು.

ಅಕ್ಷರ್ ಪಟೇಲ್ ಅಜೇಯ 38 ರನ್ ಹಾಗೂ 3 ವಿಕೆಟ್ ಗಳಿಸುವ ಮೂಲಕ ಪಂಜಾಬ್ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...