alex Certify
ಕನ್ನಡ ದುನಿಯಾ       Mobile App
       

Kannada Duniya

ಚೆನ್ನೈ ಸೂಪರ್ ಕಿಂಗ್ಸ್ ಜೊತೆ ಆಡಲು RCBಗೆ ತವಕ

rcb

ಎರಡು ವರ್ಷಗಳ ನಿಷೇಧದ ಬಳಿಕ ಚೆನ್ನೈ ಸೂಪರ್ ಕಿಂಗ್ಸ್ ತಂಡ ಐಪಿಎಲ್ ಗೆ ವಾಪಸ್ಸಾಗ್ತಿರೋದು ಧೋನಿ ಮತ್ತವರ ಅಭಿಮಾನಿಗಳಿಗೆ ಸಹಜವಾಗಿಯೇ ಖುಷಿಕೊಟ್ಟಿದೆ. ಎದುರಾಳಿ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕೂಡ ಸಿಎಸ್ಕೆ ಕಮ್ ಬ್ಯಾಕ್ ಗೆ ಕಾತರದಿಂದಿದೆ.

ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಆರ್ ಸಿಬಿ ಟ್ವೀಟ್ ಕೂಡ ಮಾಡಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಸ್ವಾತಂತ್ರ್ಯ ದಿನದ ಶುಭಾಶಯ ಹೇಳಿರುವ ಆರ್ ಸಿ ಬಿ 2018ರಲ್ಲಿ ಪರಸ್ಪರ ಮುಖಾಮುಖಿಯಾಗಲು ಕಾತರದಿಂದ ಇರುವುದಾಗಿ ಪೋಸ್ಟ್ ಮಾಡಿದೆ.

ಎರಡು ವರ್ಷಗಳ ಐಪಿಎಲ್ ನಲ್ಲಿ ದಕ್ಷಿಣ ಭಾರತದ ಎದುರಾಳಿ ತಂಡ ಸಿಎಸ್ಕೆ ಯನ್ನು ಮಿಸ್ ಮಾಡಿಕೊಂಡಿದ್ದಾಗಿ ಬರೆಯಲಾಗಿದೆ. ಬೆಂಗಳೂರು ತಂಡದ ಟ್ವೀಟ್ ಗೆ ಚೆನ್ನೈ ಸೂಪರ್ ಕಿಂಗ್ಸ್ ಕೂಡ ಪ್ರತಿಕ್ರಿಯಿಸಿದೆ. ಆದಷ್ಟು ಬೇಗ ಜೊತೆಯಾಗಿ ಆಡೋಣ ಅಂತಾ ಟ್ವೀಟ್ ಮಾಡಿದೆ.

ಆರಂಭದಿಂದ್ಲೇ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಧೋನಿ ನಾಯಕರಾಗಿದ್ರು. ಸಿಎಸ್ಕೆ ಅನುಪಸ್ಥಿತಿಯಲ್ಲಿ ಧೋನಿ ಪುಣೆ ತಂಡದ ಪರ ಆಡಿದ್ದಾರೆ. ಆದ್ರೆ ಈ ಬಾರಿ ಮತ್ತೆ ಚೆನ್ನೈಗೆ ಧೋನಿಯೇ ನಾಯಕರಾಗ್ತಾರೆ ಅನ್ನೋ ನಿರೀಕ್ಷೆಯಲ್ಲಿ ಆರ್ ಸಿಬಿ ಅವರ ಫೋಟೋವನ್ನೇ ಪೋಸ್ಟ್ ಮಾಡಿದೆ.

ಸ್ಪಾಟ್ ಫಿಕ್ಸಿಂಗ್ ಆರೋಪದ ಹಿನ್ನೆಲೆಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಜಸ್ತಾನ ರಾಯಲ್ಸ್ ತಂಡಕ್ಕೆ ಎರಡು ವರ್ಷಗಳ ನಿಷೇಧ ಹೇರಲಾಗಿತ್ತು. ಹಾಗಾಗಿ 2016 ಮತ್ತು 2017ರಲ್ಲಿ ಗುಜರಾತ್ ಲಯನ್ಸ್ ಹಾಗೂ ಪುಣೆ ಸೂಪರ್ ಜೈಂಟ್ಸ್ ತಂಡಗಳು ಐಪಿಎಲ್ ನಲ್ಲಿ ಆಡಿದ್ದವು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...