alex Certify
ಕನ್ನಡ ದುನಿಯಾ       Mobile App
       

Kannada Duniya

ಅನುಷ್ಕಾ ಬರ್ತಡೇ ಲಕ್, ಕೊನೆಗೂ ಗೆದ್ದ ಕೊಹ್ಲಿ ಬಾಯ್ಸ್

ಬೆಂಗಳೂರು: ಅನುಷ್ಕಾ ಶರ್ಮಾ ಬರ್ತಡೇ ದಿನದಂದು ವಿರಾಟ್ ಕೊಹ್ಲಿಗೆ ವಿಜಯಲಕ್ಷ್ಮಿ ಕೃಪೆ ತೋರಿದ್ದಾಳೆ. ಸತತ ಸೋಲುಗಳಿಂದ ಕಂಗೆಟ್ಟಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮುಂಬೈ ಇಂಡಿಯನ್ಸ್ ವಿರುದ್ಧ ಜಯಗಳಿಸಿದೆ.

ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐ.ಪಿ.ಎಲ್. ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಆರ್.ಸಿ.ಬಿ. 14 ರನ್ ಗಳಿಂದ ಮಣಿಸಿದೆ.

ಟಾಸ್ ಸೋತು ಮೊದಲಿಗೆ ಬ್ಯಾಟಿಂಗ್ ನಡೆಸಿದ ಆರ್.ಸಿ.ಬಿ. ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 167 ರನ್ ಗಳಿಸಿದೆ. ಮನನ್ ವೊಹ್ರಾ 45, ಕ್ವಿಂಟನ್ ಡಿ’ಕಾಕ್ 7, ಬ್ರೆಂಡನ್ ಮೆಕಲ್ 37, ವಿರಾಟ್ ಕೊಹ್ಲಿ 32, ಮನ್ ದೀಪ್ ಸಿಂಗ್ 14, ಕಾಲಿನ್ ಡಿ’ಗ್ರ್ಯಾಂಡ್ ಹೋಮ್ ಅಜೇಯ 23 ರನ್ ಗಳಿಸಿದರು. ಮುಂಬೈ ಪರವಾಗಿ ಹಾರ್ದಿಕ್ ಪಾಂಡ್ಯ 3 ವಿಕೆಟ್ ಪಡೆದರು.

168 ರನ್ ಗೆಲುವಿನ ಗುರಿ ಪಡೆದ ಮುಂಬೈ ತಂಡ 20 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 153 ರನ್ ಗಳಿಸಿತು. ಜೀನ್ ಪಾಲ್ ಡುಮಿನಿ 23, ಹಾರ್ದಿಕ್ ಪಾಂಡ್ಯ 50, ಕೃಣಾಲ್ ಪಾಂಡ್ತ 28, ಬೆನ್ ಕಟಿಂಗ್ ಅಜೇಯ 12 ರನ್ ಗಳಿಸಿದರು. ಆರ್.ಸಿ.ಬಿ. ಪರವಾಗಿ ಟಿಮ್ ಸೋಥಿ 2, ಉಮೇಶ್ ಯಾದವ್ 2, ಮೊಹಮ್ಮದ್ ಸಿರಾಜ್ 2 ವಿಕೆಟ್ ಪಡೆದರು.

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...