alex Certify
ಕನ್ನಡ ದುನಿಯಾ       Mobile App
       

Kannada Duniya

ಡಿವಿಲಿಯರ್ಸ್ ಅರ್ಧ ಶತಕ, RCB ಗೆ ಭರ್ಜರಿ ಜಯ

ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐ.ಪಿ.ಎಲ್. ಪಂದ್ಯದಲ್ಲಿ ಕಿಂಗ್ಸ್ ಇಲೆವನ್ ಪಂಜಾಬ್ ತಂಡದ ವಿರುದ್ಧ ವಿರಾಟ್ ಕೊಹ್ಲಿ ನೇತೃತ್ವದ ಆರ್.ಸಿ.ಬಿ. 4 ವಿಕೆಟ್ ಗೆಲುವು ಸಾಧಿಸಿದೆ.

ಟಾಸ್ ಸೋತು ಬ್ಯಾಟಿಂಗ್ ನಡೆಸಿದ ಪಂಜಾಬ್ 19.2 ಓವರ್ ಗಳಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು 155 ರನ್ ಗಳಿಸಿತು. ಕನ್ನಡಿಗ ಕೆ.ಎಲ್. ರಾಹುಲ್ 47, ಕರುಣ್ ನಾಯರ್ 29, ಆರ್. ಅಶ್ವಿನ್ 33 ರನ್ ಗಳಿಸಿದರು. ಆರ್.ಸಿ.ಬಿ. ಪರವಾಗಿ ಉಮೇಶ್ ಯಾದವ್ 3, ಕ್ರಿಸ್ ವೋಕ್ಸ್ 2, ಕುಲವಂತ್ ಖೆಜ್ರೊಲಿಯಾ 2, ವಾಷಿಂಗ್ಟನ್ ಸುಂದರ್ 2 ವಿಕೆಟ್ ಪಡೆದರು.

156 ರನ್ ಗೆಲುವಿನ ಗುರಿ ಪಡೆದ ಆರ್.ಸಿ.ಬಿ 19.3 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 159 ರನ್ ಗಳಿಸಿ ಗೆಲುವಿನ ನಗೆ ಬೀರಿತು. ಕ್ವಿಂಟಾನ್ ಡಿ’ಕಾಕ್ 45, ವಿರಾಟ್ ಕೊಹ್ಲಿ 21, ಎಬಿ ಡಿ’ವಿಲಿಯರ್ಸ್ 57, ಮನ್ ದೀಪ್ ಸಿಂಗ್ 22 ರನ್ ಗಳಿಸಿದರು. ಪಂಜಾಬ್ ಪರ ಆರ್.ಅಶ್ವಿನ್ 2 ವಿಕೆಟ್ ಪಡೆದರು.

Subscribe Newsletter

Get latest updates on your inbox...

Opinion Poll

  • ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಪಡೆಯುತ್ತಾ ಬಿಜೆಪಿ...?

    View Results

    Loading ... Loading ...