alex Certify
ಕನ್ನಡ ದುನಿಯಾ       Mobile App
       

Kannada Duniya

ಡಿ’ವಿಲಿಯರ್ಸ್ ಭರ್ಜರಿ ಬ್ಯಾಟಿಂಗ್, RCB ಗೆ 6 ವಿಕೆಟ್ ಜಯ

ಬೆಂಗಳೂರು: ಇಲ್ಲಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐ.ಪಿ.ಎಲ್. ಪಂದ್ಯದಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 6 ವಿಕೆಟ್ ಅಂತರದ ಜಯಗಳಿಸಿದೆ.

ಮೊದಲಿಗೆ ಬ್ಯಾಟಿಂಗ್ ನಡೆಸಿದ ಡೆಲ್ಲಿ ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 175 ರನ್ ಗಳಿಸಿತು. ಗೆಲುವಿನ ಗುರಿ ಬೆನ್ನತ್ತಿದ ಆರ್.ಸಿ.ಬಿ. 18 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 176 ರನ್ ಗಳಿಸಿ ಮತ್ತೆ ಗೆಲುವಿನ ಹಾದಿಗೆ ಮರಳಿದೆ.

ಡೆಲ್ಲಿ ಪರವಾಗಿ ಶ್ರೇಯಸ್ ಅಯ್ಯರ್ 52, ರಿಶಬ್ ಪಂತ್ 85, ರಾಹುಲ್ ತೆವಾಟ್ಲ ಅಜೇಯ 13 ರನ್ ಗಳಿಸಿದರು. ಆರ್.ಸಿ.ಬಿ. ಪರವಾಗಿ ಯಜುವೇಂದ್ರ ಚಾಹಲ್ 2, ಉಮೇಶ್ ಯಾದವ್ 1, ವಾಷಿಂಗ್ಟನ್ ಸುಂದರ್ 1, ಕೋರಿ ಆಂಡರ್ಸನ್ 1 ವಿಕೆಟ್ ಪಡೆದರು.

ಎ.ಬಿ.ಡಿ’ವಿಲಿಯರ್ಸ್ 39 ಎಸೆತಗಳಲ್ಲಿ 10 ಬೌಂಡರಿ, 5 ಸಿಕ್ಸರ್ ಒಳಗೊಂಡ ಅಜೇಯ 90 ರನ್ ಗಳಿಸಿ ಆರ್.ಸಿ.ಬಿ. ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಕ್ವಿಂಟಾನ್ ಡಿ’ಕಾಕ್ 18, ವಿರಾಟ್ ಕೊಹ್ಲಿ 30, ಕೋರಿ ಆಂಡರ್ಸನ್ 15, ಮನ್ ದೀಪ್ ಸಿಂಗ್ ಅಜೇಯ 17 ರನ್ ಗಳಿಸಿದರು. ಡೆಲ್ಲಿ ಪರವಾಗಿ ಟ್ರೆಂಟ್ ಬೋಲ್ಟ್ 1, ಗ್ಲೆನ್ ಮ್ಯಾಕ್ಸ್ ವೆಲ್ 1, ಹರ್ಷಲ್ ಪಟೇಲ್ 1 ವಿಕೆಟ್ ಪಡೆದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...