alex Certify
ಕನ್ನಡ ದುನಿಯಾ       Mobile App
       

Kannada Duniya

ಕೇರಳ ಸಂತ್ರಸ್ಥರ ನೆರವಿಗೆ ರೋನಾಲ್ಡೋ ಕೊಟ್ಟಿದ್ದರಾ 77 ಕೋಟಿ ರೂಪಾಯಿ?

ಕೇರಳ ಪ್ರವಾಹ ಸಂತ್ರಸ್ಥರ ನೆರವಿಗಾಗಿ ಸ್ಟಾರ್ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೋ ರೋನಾಲ್ಡೋ ಸುಮಾರು 77 ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ ಎಂಬ ಸುಳ್ಳು ಸುದ್ದಿ ಸಾಮಾಜಿಕ ತಾಣದಲ್ಲಿ ವ್ಯಾಪಕವಾಗಿ ಹರಡಿದೆ.

ದೇವರ ನಾಡಿನ ಜನರ ರಕ್ಷಣೆಗೆ ದೇಶವೇ ಒಗ್ಗಟ್ಟಾಗಿ ಶ್ರಮಿಸುತ್ತಿದೆ. ಸ್ಟಾರ್ ಗಳು ಸಹಾಯ ಮಾಡಿದ್ದಾರೆ. ಕೇರಳ ಸರ್ಕಾರ ಹಾಗೂ ಭಾರತೀಯ ಸೇನೆ ಸುಳ್ಳು ಸುದ್ದಿ ಹರಡದಂತೆ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದೆ. ಇತ್ತೀಚೆಗೆ ಕೇಂದ್ರ ಸರ್ಕಾರ ಫೇಸ್ ಬುಕ್, ವಾಟ್ಸಾಪ್ ಹಾಗೂ ಬೇರೆ ಸಾಮಾಜಿಕ ತಾಣಗಳಲ್ಲಿ ಹರಿದಾಡುವ ಸುಳ್ಳು ಸುದ್ದಿಯನ್ನು ತಡೆಯಲು ಕ್ರಮ ಕೈಗೊಳ್ಳಲು ಮುಂದಾಗಿದೆ.

ಅದಾಗ್ಯೂ ಇಂತಹ ಸುಳ್ಳು ಸುದ್ದಿಗಳು ಹರಿದಾಡುತ್ತಿದ್ದು, ರೋನಾಲ್ಡೋ ಹಣ ನೀಡಿಲ್ಲವೆಂಬುದು ಈಗ ಖಚಿತಪಟ್ಟಿದೆ. ಪೋರ್ಚುಗಲ್ ನಾಯಕ ಕ್ರಿಸ್ಟಿಯಾನೋ ರೋನಾಲ್ಡೊ ಕೇರಳಕ್ಕೆ ಹಣವನ್ನು ನೀಡಿದ್ರೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಸುದ್ದಿಯಾಗುತ್ತಿತ್ತು. ಜೊತೆಗೆ ಕ್ರಿಸ್ಟಿಯಾನೋ ರೋನಾಲ್ಡೋ ಆಪ್ತರನ್ನು ಕೆಲ ಪ್ರಮುಖ ಮಾಧ್ಯಮಗಳು ಸಂಪರ್ಕಿಸಿದ ವೇಳೆ ಇದು ಸುಳ್ಳು ಸುದ್ದಿ ಎಂಬುದು ಧೃಡಪಟ್ಟಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...