alex Certify
ಕನ್ನಡ ದುನಿಯಾ       Mobile App
       

Kannada Duniya

ಮಾರಾಟಕ್ಕಿರುವ ಪ್ರಸಿದ್ಧ ಫುಟ್ಬಾಲ್ ಕ್ಲಬ್ ಬೆಲೆ ಎಷ್ಟು ಗೊತ್ತಾ…?

ಇಂಗ್ಲೀಷ್ ಪ್ರೀಮಿಯರ್ ಲೀಗ್ (ಇಪಿಎಲ್) ಕ್ಲಬ್ ಚೆಲ್ಸಿಯನ್ನು ರಷ್ಯಾದ ಮಾಲೀಕ ರೋಮನ್ ಅಬ್ರಮೊವಿಚ್ ಮಾರಾಟಕ್ಕೆ ಮುಂದಾಗಿದ್ದಾರೆ. ಲಂಡನ್ ನಲ್ಲಿರುವ ಪ್ರಸಿದ್ಧ ಫುಟ್ಬಾಲ್ ಕ್ಲಬ್ ನ್ನು ಎರಡು ಅರಬ್ ಪೌಂಡ್ (ಸುಮಾರು 18000 ಕೋಟಿ ರೂಪಾಯಿ)ಗೆ ಮಾರಾಟ ಮಾಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಬ್ರಿಟನ್ ನಲ್ಲಿ ವೀಸಾ ಸಮಸ್ಯೆ ಎದುರಿಸುತ್ತಿರುವ ರೋಮನ್ ಈ ನಿರ್ಧಾರಕ್ಕೆ ಬಂದಿದ್ದಾರಂತೆ. ಇದ್ರ ಜೊತೆಗೆ ಸ್ಟಾಂಫೋರ್ಡ್ ಬ್ರಿಜ್ ಕ್ರೀಡಾಂಗಣದ ಸಾಮರ್ಥ್ಯವನ್ನು 60,000ಕ್ಕೆ ಏರಿಸುವ ನಿರ್ಧಾರದಿಂದಲೂ ಹಿಂದೆ ಸರಿದಿದ್ದಾರೆ. ಈ ಕೆಲಸಕ್ಕೆ 50 ಕೋಟಿ ಪೌಂಡ್ ಖರ್ಚಾಗುತ್ತಿತ್ತು,

ಒಂದು ವೇಳೆ ಅವ್ರು ಚೆಲ್ಸಿ ಕ್ಲಬ್ ಮಾರಾಟ ಮಾಡಿದ್ರೆ ಇದು ವಿಶ್ವದ ದುಬಾರಿ ಕ್ಲಬ್ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಲಿದೆ. ಚೆಲ್ಸಿ ಬೆಲೆ 2006 ರಲ್ಲಿ ಮಾರಾಟವಾದ ಮ್ಯಾಂಚೆಸ್ಟರ್ ಯುನೈಟೆಡ್ ಗಿಂತ ಎರಡು ಪಟ್ಟು ಹೆಚ್ಚಾಗಲಿದೆ. 2003 ರಲ್ಲಿ ರೋಮನ್, ಚೆಲ್ಸಿ ಕ್ಲಬ್ 14 ಕೋಟಿ ಪೌಂಡ್ ಗೆ ಖರೀದಿ ಮಾಡಿದ್ದರು. ಈಗ ಎರಡು ಅರಬ್ ಪೌಂಡ್ ಗೆ ಮಾರಾಟ ಮಾಡ್ತಿರುವುದ್ರಿಂದ ರೋಮನ್ ಗೆ ಸಾಕಷ್ಟು ಲಾಭವಾಗಲಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...