alex Certify
ಕನ್ನಡ ದುನಿಯಾ       Mobile App
       

Kannada Duniya

ರೋಹಿತ್ ಶರ್ಮಾ ಮುಂದಿದೆ ಬಹು ದೊಡ್ಡ ಸವಾಲು

ನವದೆಹಲಿ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ವಿಶ್ರಾಂತಿಯಲ್ಲಿದ್ದು, ಮಾರ್ಚ್ 6 ರಿಂದ ಆರಂಭವಾಗುವ ಟಿ -20 ತ್ರಿಕೋನ ಸರಣಿಯಲ್ಲಿ ರೋಹಿತ್ ಶರ್ಮಾ ತಂಡವನ್ನು ಮುನ್ನಡೆಸಲಿದ್ದಾರೆ.

ರೋಹಿತ್ ಶರ್ಮಾ, ಶಿಖರ್ ಧವನ್, ಕೆ.ಎಲ್. ರಾಹುಲ್, ಸುರೇಶ್ ರೈನಾ, ಮನೀಶ್ ಪಾಂಡೆ, ದಿನೇಶ್ ಕಾರ್ತಿಕ್, ದೀಪಕ್ ಹೂಡಾ, ವಾಷಿಂಗ್ಟನ್ ಸುಂದರ್, ಯಜುವೇಂದ್ರ ಚಾಹಲ್, ಅಕ್ಷರ್ ಪಟೇಲ್, ವಿಜಯ್ ಶಂಕರ್, ಶಾರ್ದೂಲ್ ಠಾಕೂರ್, ಜಯದೇವ್ ಉನದ್ಕಟ್, ಮೊಹಮ್ಮದ್ ಸಿರಾ, ರಿಶಬ್ ಪಂತ್ ತಂಡದಲ್ಲಿದ್ದಾರೆ.

ಶ್ರೀಲಂಕಾದಲ್ಲಿ ನಡೆಯಲಿರುವ ತ್ರಿಕೋನ ಸರಣಿಯಲ್ಲಿ ಭಾರತ, ಶ್ರೀಲಂಕಾ, ಬಾಂಗ್ಲಾದೇಶ ತಂಡಗಳು ಭಾಗವಹಿಸಲಿವೆ. ಮಾರ್ಚ್ 6 ರಂದು ಸಂಜೆ 7 ಗಂಟೆಗೆ ಕೊಲಂಬೊದಲ್ಲಿ ನಡೆಯುವ ಮೊದಲ ಪಂದ್ಯದಲ್ಲಿ ಭಾರತ –ಶ್ರೀಲಂಕಾ ಮುಖಾಮುಖಿಯಾಗಲಿವೆ.

ಮಾರ್ಚ್ 8 ರಂದು ಭಾರತ -ಬಾಂಗ್ಲಾದೇಶ, ಮಾರ್ಚ್ 10 ರಂದು ಶ್ರೀಲಂಕಾ –ಬಾಂಗ್ಲಾದೇಶ, ಮಾರ್ಚ್ 12 ರಂದು ಭಾರತ –ಶ್ರೀಲಂಕಾ, ಮಾರ್ಚ್ 14 ರಂದು ಭಾರತ –ಬಾಂಗ್ಲಾದೇಶ, ಮಾರ್ಚ್ 16 ರಂದು ಶ್ರೀಲಂಕಾ –ಬಾಂಗ್ಲಾದೇಶ, ಮಾರ್ಚ್ 18 ಫೈನಲ್ ಪಂದ್ಯ ನಡೆಯಲಿದೆ.

ತ್ರಿಕೋನ ಟಿ -20 ಸರಣಿಯಲ್ಲಿ ಯುವ ಆಟಗಾರರನ್ನು ಒಳಗೊಂಡಿರುವ ತಂಡವನ್ನು ಮುನ್ನಡೆಸುವ ಜವಾಬ್ದಾರಿ ರೋಹಿತ್ ಶರ್ಮಾ ಅವರ ಮೇಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...