alex Certify
ಕನ್ನಡ ದುನಿಯಾ       Mobile App
       

Kannada Duniya

ಟಿ -20: ಶ್ರೀಲಂಕಾ ಮಣಿಸಿದ ಭಾರತಕ್ಕೆ ಸರಣಿ

ಇಂದೋರ್: ಇಂದೋರ್ ನ ಹೋಳ್ಕರ್ ಕ್ರೀಡಾಂಗಣದಲ್ಲಿ ನಡೆದ ಟಿ -20 ಸರಣಿಯ 2 ನೇ ಪಂದ್ಯದಲ್ಲಿ ಭಾರತ 88 ರನ್ ಅಂತರದಿಂದ ಭರ್ಜರಿ ಜಯಗಳಿಸಿ, ಸರಣಿ ವಶಪಡಿಸಿಕೊಂಡಿದೆ.

ರೋಹಿತ್ ಶರ್ಮಾ, ಕೆ.ಎಲ್. ರಾಹುಲ್ ಭರ್ಜರಿ ಬ್ಯಾಟಿಂಗ್, ಯಜುವೇಂದ್ರ ಚಾಹಲ್, ಕುಲದೀಪ್ ಯಾದವ್ ಮಾರಕ ಬೌಲಿಂಗ್ ಗೆ ಶ್ರೀಲಂಕಾ ಸೋಲು ಕಂಡಿದೆ.

ಮೊದಲಿಗೆ ಬ್ಯಾಟಿಂಗ್ ಮಾಡಿದ ಭಾರತ, ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 260 ರನ್ ಗಳಿಸಿದೆ. 261 ರನ್ ಗೆಲುವಿನ ಗುರಿ ಪಡೆದ ಶ್ರೀಲಂಕಾ 17.2 ಓವರ್ ಗಳಲ್ಲಿ 172 ರನ್ ಗಳಿಸಿ ಸೋಲು ಕಂಡಿದೆ.

ಶ್ರೀಲಂಕಾ ಪರವಾಗಿ ನಿರೊಶಾನ್ ಡಿಕ್ವೆಲ್ಲಾ 25, ಉಪುಲ್ ತರಂಗ 47, ಕುಸಾಲ್ ಪೆರೆರಾ 77, ತಿಸಾರ ಪೆರೆರಾ 0, ಅಸೆಲಾ ಗುಣರತ್ನೆ 0, ಸದಿರ ಸಮರ ವಿಕ್ರಮ 5, ಚತುರಂಗ ಡಿಸಿಲ್ವ 1, ಅಖಿಲ ಧನಂಜಯ 5, ದುಷ್ಮಂತ ಚಾಮಿರ 3, ನುವಾನ್ ಪ್ರದೀಪ್ ಅಜೇಯ 0, ಏಂಜೆಲೋ ಮ್ಯಾಥ್ಯೂಸ್(ನಿವೃತ್ತಿ) 0 ರನ್ ಗಳಿಸಿದ್ದಾರೆ.

ಭಾರತದ ಪರ ಯಜುವೇಂದ್ರ ಚಾಹಲ್ 4, ಕುಲದೀಪ್ ಯಾದವ್ 3, ಜಯದೇವ್ ಉನದ್ಕತ್ 1, ಹಾರ್ದಿಕ್ ಪಾಂಡ್ಯ 1 ವಿಕೆಟ್ ಪಡೆದರು.

ಟಾಸ್ ಗೆದ್ದ ಶ್ರೀಲಂಕಾ ನಾಯಕ ತಿಸಾರ ಪೆರೆರಾ ಫೀಲ್ಡಿಂಗ್ ಆಯ್ದುಕೊಂಡಿದ್ದರು. ಮೊದಲಿಗೆ ಬ್ಯಾಟಿಂಗ್ ಮಾಡಿದ ಭಾರತದ ಪರವಾಗಿ ಲೋಕೇಶ್ ರಾಹುಲ್ ಮತ್ತು ರೋಹಿತ್ ಶರ್ಮಾ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ.

ಆರಂಭದಿಂದಲೂ ಶ್ರೀಲಂಕಾ ಬೌಲರ್ ಗಳನ್ನು ಮನಬಂದಂತೆ ದಂಡಿಸಿದ ರೋಹಿತ್ ಶರ್ಮಾ 43 ಎಸೆತಗಳಲ್ಲಿ 10 ಸಿಕ್ಸರ್, 12 ಬೌಂಡರಿ ಒಳಗೊಂಡ 118 ರನ್ ಗಳಿಸಿದ್ದಾರೆ.

ಕೆ.ಎಲ್. ರಾಹುಲ್ 89, ಎಂ.ಎಸ್. ಧೋನಿ 28, ಹಾರ್ದಿಕ್ ಪಾಂಡ್ಯ 10, ಶ್ರೇಯಸ್ ಅಯ್ಯರ್ 0, ಮನೀಶ್ ಪಾಂಡೆ ಅಜೇಯ 1, ದಿನೇಶ್ ಕಾರ್ತಿಕ್ ಅಜೇಯ 5 ರನ್ ಗಳಿಸಿದ್ದಾರೆ. ಶ್ರೀಲಂಕಾ ಪರವಾಗಿ ನುವಾನ್ ಪ್ರದೀಪ್ 2, ತಿಸಾರ ಪೆರೆರಾ 2, ದುಷ್ಮಂತ ಚಾಮಿರ 1 ವಿಕೆಟ್ ಪಡೆದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...