alex Certify
ಕನ್ನಡ ದುನಿಯಾ       Mobile App
       

Kannada Duniya

ರೋಹಿತ್ ಶತಕ, ಶ್ರೀಲಂಕಾಗೆ 261 ರನ್ ಟಾರ್ಗೆಟ್

ಇಂದೋರ್: ಇಂದೋರ್ ನ ಹೋಳ್ಕರ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಟಿ -20 ಸರಣಿಯ 2 ನೇ ಪಂದ್ಯದಲ್ಲಿ ಮೊದಲಿಗೆ ಬ್ಯಾಟಿಂಗ್ ಮಾಡಿದ ಭಾರತ, ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 260 ರನ್ ಗಳಿಸಿದೆ.

ಟಾಸ್ ಗೆದ್ದ ಶ್ರೀಲಂಕಾ ನಾಯಕ ತಿಸಾರ ಪೆರೆರಾ ಫೀಲ್ಡಿಂಗ್ ಆಯ್ದುಕೊಂಡಿದ್ದಾರೆ. ಮೊದಲಿಗೆ ಬ್ಯಾಟಿಂಗ್ ಮಾಡಿದ ಭಾರತದ ಪರವಾಗಿ ಲೋಕೇಶ್ ರಾಹುಲ್ ಮತ್ತು ರೋಹಿತ್ ಶರ್ಮಾ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ.

ಆರಂಭದಿಂದಲೂ ಶ್ರೀಲಂಕಾ ಬೌಲರ್ ಗಳನ್ನು ಮನಬಂದಂತೆ ದಂಡಿಸಿದ ರೋಹಿತ್ ಶರ್ಮಾ 43 ಎಸೆತಗಳಲ್ಲಿ 10 ಸಿಕ್ಸರ್, 12 ಬೌಂಡರಿ ಒಳಗೊಂಡ 118 ರನ್ ಗಳಿಸಿದ್ದಾರೆ.

ಕೆ.ಎಲ್. ರಾಹುಲ್ 89, ಎಂ.ಎಸ್. ಧೋನಿ 28, ಹಾರ್ದಿಕ್ ಪಾಂಡ್ಯ 10, ಶ್ರೇಯಸ್ ಅಯ್ಯರ್ 0, ಮನೀಶ್ ಪಾಂಡೆ ಅಜೇಯ 1, ದಿನೇಶ್ ಕಾರ್ತಿಕ್ ಅಜೇಯ 5 ರನ್ ಗಳಿಸಿದ್ದಾರೆ.

ಶ್ರೀಲಂಕಾ ಪರವಾಗಿ ನುವಾನ್ ಪ್ರದೀಪ್ 2, ತಿಸಾರ ಪೆರೆರಾ 2, ದುಷ್ಮಂತ ಚಾಮಿರ 1 ವಿಕೆಟ್ ಪಡೆದರು. ಶ್ರೀಲಂಕಾ ಗೆಲುವಿಗೆ 261 ರನ್ ಗಳಿಸಬೇಕಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...