alex Certify
ಕನ್ನಡ ದುನಿಯಾ       Mobile App
       

Kannada Duniya

ಟೀಂ ಇಂಡಿಯಾದ 17ನೇ ಸದಸ್ಯರು ಯಾರು ಗೊತ್ತಾ…?

ರೋಹಿತ್ ಶರ್ಮಾ 2017ರಲ್ಲಿ ಸಾಕಷ್ಟು ಅದ್ಭುತ ಇನ್ನಿಂಗ್ಸ್ ಆಡಿದ್ದಾರೆ. ದಾಖಲೆಗಳನ್ನು ನಿರ್ಮಿಸಿದ್ದಾರೆ. ಏಕದಿನ ಪಂದ್ಯಗಳಲ್ಲಿ ಮೂರನೇ ದ್ವಿಶತಕ ಬಾರಿಸಿರೋದು ನಿಜಕ್ಕೂ ಅಪ್ರತಿಮ ಸಾಧನೆ. ಮೊಹಾಲಿಯಲ್ಲಿ ಶ್ರೀಲಂಕಾ ವಿರುದ್ಧ ರೋಹಿತ್ ದ್ವಿಶತಕ ಸಿಡಿಸಿದ್ದರು.

ಹಿಟ್ ಮ್ಯಾನ್ ಅಂತಾನೇ ಖ್ಯಾತಿ ಪಡೆದಿರೋ ರೋಹಿತ್ ಟಿ-20ಯಲ್ಲಿ ಕೇವಲ 35 ಬಾಲ್ ಗಳಲ್ಲಿ ದಾಖಲೆಯ ಸೆಂಚುರಿ ಬಾರಿಸಿದ್ದಾರೆ. ವಿಶೇಷ ಅಂದ್ರೆ ಈ ಸಾಧನೆಗಳಿಗೆಲ್ಲಾ ರೋಹಿತ್ ಶರ್ಮಾಗೆ ಸ್ಪೂರ್ತಿಯಾದವರು ಪತ್ನಿ ರಿತಿಕಾ.

ಪ್ರತಿ ಪಂದ್ಯದಲ್ಲೂ ರಿತಿಕಾ ಹಾಜರಿರ್ತಾರೆ. ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತು ಪತಿಗೆ ಚಿಯರ್ ಅಪ್ ಮಾಡ್ತಾರೆ. ಹಾಗಾಗಿ ರಿತಿಕಾ ಟೀಂ ಇಂಡಿಯಾದ 17ನೇ ಸದಸ್ಯೆ ಅಂತಾ ಎಲ್ಲರೂ ಹಾಸ್ಯ ಮಾಡ್ತಿದ್ದಾರೆ. ಇದನ್ನು ರೋಹಿತ್ ಕೂಡ ತಮಾಷೆಯಾಗಿಯೇ ಸ್ವೀಕರಿಸಿದ್ದಾರೆ.

ತಮ್ಮ ಸಾಧನೆಗೆ ಪತ್ನಿಯೇ ಸ್ಪೂರ್ತಿ ಅಂತಾ ಹೇಳಿದ್ದಾರೆ. ಆಕೆ ಫ್ರೆಂಡ್, ಗೈಡ್, ಮ್ಯಾನೇಜರ್ ಎಲ್ಲವೂ ಅಂತಾ ಹೊಗಳಿದ್ದಾರೆ. 2017ರಲ್ಲಿ ರೋಹಿತ್ ಶರ್ಮಾ, ಏಕದಿನ ಪಂದ್ಯಗಳಲ್ಲಿ 1293 ರನ್ ಬಾರಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...