alex Certify
ಕನ್ನಡ ದುನಿಯಾ       Mobile App
       

Kannada Duniya

ವಿವಾಹ ವಾರ್ಷಿಕೋತ್ಸವದಂದು ಪತ್ನಿಗೆ ‘ಡಬಲ್’ ಗಿಫ್ಟ್ ಕೊಟ್ಟ ರೋಹಿತ್

ಮೊಹಾಲಿಯಲ್ಲಿ ಅಬ್ಬರಿಸಿ ಬೊಬ್ಬಿರಿದಿರುವ ರೋಹಿತ್ ಶರ್ಮಾ ತಮ್ಮ ಪತ್ನಿಗೆ ದ್ವಿಶತಕವನ್ನು ಉಡುಗೊರೆಯಾಗಿ ಕೊಟ್ಟಿದ್ದಾರೆ. ಯಾಕೆ ಗೊತ್ತಾ? ಇಂದು ರೋಹಿತ್ ಶರ್ಮಾ ಮತ್ತವರ ಪತ್ನಿ ರಿತಿಕಾರ ವಿವಾಹ ವಾರ್ಷಿಕೋತ್ಸವ. 2015ರ ಡಿಸೆಂಬರ್ 13ರಂದು ರೋಹಿತ್ ಹಾಗೂ ರಿತಿಕಾ ಸಪ್ತಪದಿ ತುಳಿದಿದ್ದರು.

ರೋಹಿತ್ ಶ್ರೀಲಂಕಾ ವಿರುದ್ಧ ಬಾರಿಸಿರುವ ಡಬಲ್ ಸೆಂಚುರಿ ಪತ್ನಿಗೆ ಆ್ಯನಿವರ್ಸರಿ ಗಿಫ್ಟ್ ಅನ್ನೋದ್ರಲ್ಲಿ ಅನುಮಾನವೇ ಇಲ್ಲ. ಪತ್ನಿ ರಿತಿಕಾ ಕೂಡ ಮ್ಯಾಚ್ ನೋಡಲು ಬಂದಿದ್ರು. ಶತಕ ಪೂರ್ಣಗೊಳ್ಳುತ್ತಿದ್ದಂತೆ ಅಭಿಮಾನಿಗಳತ್ತ ಬ್ಯಾಟ್ ಬೀಸಿದ ರೋಹಿತ್ ತಮ್ಮ ಪತ್ನಿಗೆ ಸಿಹಿ ಮುತ್ತೊಂದನ್ನು ರವಾನಿಸಿದ್ರು.

ರೋಹಿತ್ ದ್ವಿಶತಕದ ಸನಿಹದಲ್ಲಿದ್ದಾಗ ಪತ್ನಿ ರಿತಿಕಾ ಸಖತ್ ಟೆನ್ಷನ್ ಮಾಡ್ಕೊಂಡಿದ್ರು. 199 ರನ್ ಆಗ್ತಿದ್ದಂತೆ ಅವರ ಆತಂಕ ಇನ್ನೂ ಹೆಚ್ಚಾಗಿತ್ತು. ಆದ್ರೆ ರೋಹಿತ್ ಪತ್ನಿಗೆ ನಿರಾಸೆ ಮಾಡಿಲ್ಲ. 200 ರನ್ ಪೂರೈಸಿ ವಿವಾಹ ವಾರ್ಷಿಕೋತ್ಸವಕ್ಕೆ ಅದ್ಭುತವಾದ ಗಿಫ್ಟನ್ನೇ ಕೊಟ್ಟಿದ್ದಾರೆ. ದ್ವಿಶತಕ ಬಾರಿಸಿದ ಬಳಿಕವೂ ಪತ್ನಿ ರಿತಿಕಾಗೆ ಗಾಳಿಯಲ್ಲೇ ಸಿಹಿ ಮುತ್ತು ನೀಡಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಗುಜರಾತ್ ಫಲಿತಾಂಶ ಕರ್ನಾಟಕ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆಯೇ...?

    View Results

    Loading ... Loading ...