alex Certify
ಕನ್ನಡ ದುನಿಯಾ       Mobile App
       

Kannada Duniya

ಫಿಫಾ ವಿಶ್ವಕಪ್ ನಲ್ಲಿ ತ್ರಿವರ್ಣ ಧ್ವಜ ಹಿಡಿದು ನಿಂತ ರೋಹಿತ್ ಶರ್ಮಾ

ಫಿಫಾ ವಿಶ್ವಕಪ್ ಪಂದ್ಯಾವಳಿಗಳು ಜೂನ್ 14 ರಿಂದ ರಷ್ಯಾದಲ್ಲಿ ಶುರುವಾಗಿದೆ. ಜೂನ್ 14ರಿಂದ ಜುಲೈ 15ರವರೆಗೆ ವಿಶ್ವಕಪ್ ಪಂದ್ಯಾವಳಿಗಳು ನಡೆಯಲಿವೆ. ಫಿಫಾ ವಿಶ್ವಕಪ್ ನಲ್ಲಿ 64 ಪಂದ್ಯಗಳು ನಡೆಯಲಿವೆ. ವಿಶ್ವದಾದ್ಯಂತ ಫಿಫಾ ಜ್ವರ ಜೋರಾಗಿದೆ. ಭಾರತ ಫಿಫಾದಲ್ಲಿ ಭಾಗಿಯಾಗಿಲ್ಲ. ಆದ್ರೆ ಭಾರತದಲ್ಲೂ ಫಿಫಾ ಅಭಿಮಾನಿಗಳ ಸಂಖ್ಯೆ ಕಡಿಮೆಯೇನಿಲ್ಲ.

ಭಾರತದ ಕ್ರಿಕೆಟರ್ಸ್, ರಾಜಕಾರಣಿಗಳು, ಕಲಾವಿದರು ಸೇರಿದಂತೆ ಭಾರತದ ಅಭಿಮಾನಿಗಳು ಫಿಫಾ ಹಬ್ಬದಲ್ಲಿ ಮಿಂದೇಳ್ತಿದ್ದಾರೆ. ಅಭಿಮಾನಿಗಳು ತಮಗಿಷ್ಟವಾಗುವ ತಂಡಕ್ಕೆ ಬೆಂಬಲ ನೀಡ್ತಿದ್ದಾರೆ. ಭಾರತದ ಕ್ರಿಕೆಟ್ ಆಟಗಾರ ರೋಹಿತ್ ಶರ್ಮಾ ಕೂಡ ಫಿಫಾ ವಿಶ್ವಕಪ್ ವೀಕ್ಷಿಸಲು ರಷ್ಯಾಕ್ಕೆ ತೆರಳಿದ್ದಾರೆ.

ರಷ್ಯಾದಲ್ಲಿ ರೋಹಿತ್ ಭಾರತದ ಭಾವುಟ ಹಿಡಿದು ನಿಂತಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಭಾರತ ವಿಶ್ವಕಪ್ ನಲ್ಲಿ ಆಡ್ತಿಲ್ಲ ನಿಜ. ಆದ್ರೆ ಭಾರತದ ಧ್ವಜ ಎಲ್ಲೆಡೆ ರಾರಾಜಿಸಬೇಕೆಂಬುದು ರೋಹಿತ್ ಅಭಿಪ್ರಾಯ.

ಇನ್ಸ್ಟ್ರಾಗ್ರಾಮ್ ನಲ್ಲಿ ಫೋಟೋ ಹಂಚಿಕೊಂಡಿರುವ ರೋಹಿತ್ ಎಲ್ಲೆಡೆ ಭಾರತದ ತ್ರಿವರ್ಣ ಧ್ವಜ ಹಾರಾಡಬೇಕು ಎಂದಿದ್ದಾರೆ. ಪೋರ್ಚುಗೀಸರ ಹಿಂದಿನ ವಸಾಹುತು ಗೋವಾದಲ್ಲೂ ಫಿಫಾ ಜ್ವರ ಜೋರಿದೆ. ಬ್ರೆಜಿಲ್ ಗೆ ಅಲ್ಲಿನ ಜನರು ಬೆಂಬಲ ನೀಡ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...