alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಮಾಡೆಲ್ ಜೊತೆ ಡೇಟ್ ಮಾಡಿದ್ದಾರೆ ರೋಹಿತ್ ಶರ್ಮಾ

ಗ್ಲಾಮರ್ ಹಾಗೂ ಕ್ರಿಕೆಟ್ ಜಗತ್ತಿನ ಮಧ್ಯೆ ಬಿಡಿಸಲಾಗದ ನಂಟಿದೆ. ಜಾಹೀರಾತು ಅಥವಾ ದೊಡ್ಡ ದೊಡ್ಡ ಪಾರ್ಟಿಗಳಲ್ಲಿ ಮಾಡೆಲ್ ಗಳು ಕ್ರಿಕೆಟ್ ಆಟಗಾರರಿಗೆ ಪರಿಚಿತರಾಗ್ತಾರೆ. ಕಾಮನ್ ಫ್ರೆಂಡ್ ಮೂಲಕ ರೋಹಿತ್ ಶರ್ಮಾ ಹೆಸರು ಕೂಡ ಮಾಡೆಲ್ ಒಬ್ಬಳ ಜೊತೆ ನಂಟು ಹಾಕಿಕೊಂಡಿತ್ತು.

ರೋಹಿತ್ ಶರ್ಮಾ ಜೀವನದಲ್ಲಿ ಪ್ರೀತಿ ಮಳೆಗೈದ ಮಾಡೆಲ್ ಬೇರ್ಯಾರೂ ಅಲ್ಲ ಚರ್ಚಿತ ಮಾಡೆಲ್ ಸೋಫಿಯಾ ಹಯಾತ್. ಸಾಮಾಜಿಕ ಜಾಲತಾಣದ ಪೋಸ್ಟ್ ಮೂಲಕ ಸುದ್ದಿ ಮಾಡ್ತಿರುವ ಸೋಫಿಯಾ, ರೋಹಿತ್ ಶರ್ಮಾ ಜೊತೆ ಡೇಟಿಂಗ್ ಮಾಡ್ತಿದ್ದೇನೆಂದು ಒಪ್ಪಿಕೊಂಡಿದ್ದಳು.

ಎಲ್ಲ ವದಂತಿಗಳಿಗೆ ತೆರೆ ಎಳೆಯುತ್ತೇನೆ. ನಾನು ರೋಹಿತ್ ಶರ್ಮಾ ಜೊತೆ ಡೇಟ್ ಮಾಡಿದ್ದೆ. ಆದ್ರೀಗ ಎಲ್ಲ ಮುಗಿದಿದೆ. ಮತ್ತೆ ರೋಹಿತ್ ಶರ್ಮಾ ಜೊತೆ ಸ್ನೇಹ ಬೆಳೆಸಲು ಸಾಧ್ಯವಿಲ್ಲ. ಜಂಟಲ್ಮೆನ್ ಹುಡುಕಾಟದಲ್ಲಿದ್ದೇನೆ ಎಂದು ಸೋಫಿಯಾ ಟ್ವೀಟ್ ಮಾಡಿದ್ದಳು. 2012 ಅಕ್ಟೋಬರ್ 28ರಂದು ಸೋಫಿಯಾ ಟ್ವೀಟ್ ಮಾಡಿದ್ದಳು.

ಸೋಫಿಯಾ ಈ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. 2012 ರಲ್ಲಿ ಕರ್ವಿ ಐಕಾನ್ ಪ್ರಶಸ್ತಿ ಗೆದ್ದಿದ್ದ ಸೋಫಿಯಾ 2016ರಲ್ಲಿ ಸನ್ಯಾಸಿಯಾಗುವುದಾಗಿ ಘೋಷಣೆ ಮಾಡಿದ್ದಳು. ತನ್ನ ಹೆಸರನ್ನು ಕೂಡ ಬದಲಾಯಿಸಿಕೊಂಡಿದ್ದಳು. 2017 ರಲ್ಲಿ ಬಾಯ್ ಫ್ರೆಂಡ್ ವ್ಲಾಡ್ ಜೊತೆ ಮದುವೆಯಾಗಿದ್ದ ಸೋಫಿಯಾ ಒಂದೇ ವರ್ಷಕ್ಕೆ ಬೇರೆಯಾಗಿದ್ದಾಳೆ. ರೋಹಿತ್ ಶರ್ಮಾ 2015ರಲ್ಲಿಯೇ ಗೆಳತಿ ರಿತಿಕಾ ಜೊತೆ ಮದುವೆಯಾಗಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...