alex Certify
ಕನ್ನಡ ದುನಿಯಾ       Mobile App
       

Kannada Duniya

ಟೆಸ್ಟ್ ಟೀಂಗೆ ವಾಪಸ್ ಆದ ರೋಹಿತ್ ಶರ್ಮಾ

indian-bengaluru-south-african-cricket-teams-practice_ce52bbec-64bb-11e7-8e9a-26934b659213

ಶ್ರೀಲಂಕಾದಲ್ಲಿ ನಡೆಯುವ ಟೆಸ್ಟ್ ಸರಣಿಗೆ ಟೀಂ ಇಂಡಿಯಾ ಘೋಷಣೆಯಾಗಿದೆ. 16 ಆಟಗಾರರ ಪಟ್ಟಿಯಲ್ಲಿ ರೋಹಿತ್ ಶರ್ಮಾ ಸ್ಥಾನ ಪಡೆದಿದ್ದಾರೆ. ಜುಲೈ 26ರಿಂದ ಶುರುವಾಗುವ ಮೂರು ಟೆಸ್ಟ್ ಪಂದ್ಯದಲ್ಲಿ ಭಾರತ, ಶ್ರೀಲಂಕಾವನ್ನು ಎದುರಿಸಲಿದೆ.

ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮೆನ್ ಕರುಣ್ ನಾಯರ್ ತಂಡದಿಂದ ಹೊರಗುಳಿದಿದ್ದು, ರೋಹಿತ್ ಶರ್ಮಾ ತಂಡಕ್ಕೆ ವಾಪಸ್ ಆಗಿದ್ದಾರೆ. 30 ವರ್ಷದ ರೋಹಿತ್ ಶರ್ಮಾ ನ್ಯೂಜಿಲ್ಯಾಂಡ್ ವಿರುದ್ಧ ಅಕ್ಟೋಬರ್ 2016ರಲ್ಲಿ ಕೊನೆಯ ಟೆಸ್ಟ್ ಪಂದ್ಯವನ್ನಾಡಿದ್ದರು.

ತೊಡೆಯ ಗಾಯದಿಂದ ಬಳಲುತ್ತಿದ್ದ ರೋಹಿತ್ ಗೆ ಮತ್ತೆ ಅವಕಾಶ ಸಿಕ್ಕಿರಲಿಲ್ಲ. ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಮುಂಬೈ ಪರ ರೋಹಿತ್ ಮೈದಾನಕ್ಕಿಳಿದಿದ್ದರು. ಟೀಂ ಇಂಡಿಯಾ ಶ್ರೀಲಂಕಾ ವಿರುದ್ಧ ಹೊಸ ಕೋಚ್ ಅಡಿ ಆಡಲಿದೆ. ಸೋಮವಾರ ಹೊಸ ಕೋಚ್ ಆಯ್ಕೆ ನಡೆಯಲಿದೆ.

ಮೂರು ಟೆಸ್ಟ್ ಪಂದ್ಯ ಹಾಗೂ ಐದು ಏಕದಿನ ಪಂದ್ಯಗಳು ಶ್ರೀಲಂಕಾದಲ್ಲಿ ನಡೆಯಲಿವೆ. ಒಂದು ಟ್ವೆಂಟಿ-20 ಪಂದ್ಯ ನಡೆಯಲಿದ್ದು, ಮೊದಲ ಟೆಸ್ಟ್ ಜುಲೈ 26-30 ರವರೆಗೆ ನಡೆಯಲಿದೆ.

ಟೆಸ್ಟ್ ಸರಣಿಗೆ ಟೀಂ ಇಂಡಿಯಾ ಆಟಗಾರರ ಪಟ್ಟಿ ಹೀಗಿದೆ: ವಿರಾಟ್ ಕೊಹ್ಲಿ (ನಾಯಕ), ಮುರಳಿ ವಿಜಯ್, ಕೆ.ಎಲ್. ರಾಹುಲ್, ಚೇತೇಶ್ವರ್ ಪೂಜಾರ್, ಅಜಿಂಕ್ಯ ರಹಾನೆ, ರೋಹಿತ್ ಶರ್ಮಾ, ಅಶ್ವಿನ್, ಜಡೇಜಾ, ಇಶಾಂತ್ ಶರ್ಮಾ, ಉಮೇಶ್ ಯಾದವ್, ಪಾಂಡ್ಯ, ಭುವನೇಶ್ವರ್ ಕುಮಾರ್, ಶಮಿ, ಕುಲದೀಪ್ ಯಾದವ್, ಅಭಿನವ್ ಮುಕುಂದ್.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...