alex Certify
ಕನ್ನಡ ದುನಿಯಾ       Mobile App
       

Kannada Duniya

ಆಸ್ಟ್ರೇಲಿಯಾ ಪ್ರವಾಸಕ್ಕೂ ಮುನ್ನ ರೋಹಿತ್ ಶರ್ಮಾಗೆ ವಿಶ್ರಾಂತಿ

ಭಾರತ ಕ್ರಿಕೆಟ್ ತಂಡ ಈ ವಾರ ಆಸ್ಟ್ರೇಲಿಯಾಕ್ಕೆ ಪ್ರಯಾಣ ಬೆಳೆಸಲಿದೆ. ನವೆಂಬರ್ 21ರಿಂದ ಶುರುವಾಗಲಿರುವ ಟಿ-20 ಪಂದ್ಯಕ್ಕೆ ಭಾರತ ಸಜ್ಜಾಗುತ್ತಿದೆ. ಆಸ್ಟ್ರೇಲಿಯಾದಲ್ಲಿ ಟಿ-20 ಪಂದ್ಯ, ಏಕದಿನ ಪಂದ್ಯ ಹಾಗೂ ಟೆಸ್ಟ್ ಪಂದ್ಯ ನಡೆಯಲಿದೆ. ಆಸ್ಟ್ರೇಲಿಯಾ ಪ್ರವಾಸಕ್ಕಿಂತ ಮೊದಲು ರೋಹಿತ್ ಶರ್ಮಾ ನ್ಯೂಜಿಲ್ಯಾಂಡ್ ವಿರುದ್ಧ ಮೈದಾನಕ್ಕಿಳಿಯಬೇಕಿತ್ತು. ಬಿಸಿಸಿಐ ಇಂಡಿಯಾ-ಎ ತಂಡದಲ್ಲಿ ಶರ್ಮಾ ಹೆಸರನ್ನು ಸೇರಿಸಿತ್ತು. ಆದ್ರೆ ನ್ಯೂಜಿಲ್ಯಾಂಡ್ ವಿರುದ್ಧ ಶರ್ಮಾರನ್ನು ಮೈದಾನಕ್ಕಿಳಿಸುವ ಬದಲು ವಿಶ್ರಾಂತಿ ನೀಡಲು ಬಿಸಿಸಿಐ ನಿರ್ಧರಿಸಿದೆ.

ಭಾರತದ ಕೆಲ ಆಟಗಾರರು ನ್ಯೂಜಿಲ್ಯಾಂಡ್ ವಿರುದ್ಧ ಮೂರು ಏಕದಿನ ಪಂದ್ಯ ಹಾಗೂ ಟೆಸ್ಟ್ ಪಂದ್ಯವನ್ನಾಡಲು ನ್ಯೂಜಿಲ್ಯಾಂಡ್ ಗೆ ತೆರಳಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧ ನಡೆದ ಟಿ-20 ಪಂದ್ಯದಲ್ಲಿ ಶರ್ಮಾ ಆಡಬೇಕಾದ ಕಾರಣ ತಂಡದ ಜೊತೆ ನ್ಯೂಜಿಲ್ಯಾಂಡ್ ಗೆ ಹೋಗಿರಲಿಲ್ಲ. ನಂತ್ರ ಇಂಡಿಯಾ-ಎ ತಂಡವನ್ನು ಶರ್ಮಾ ಸೇರಬೇಕಿತ್ತು.

ಬಿಸಿಸಿಐ ಮೆಡಿಕಲ್ ಟೀಂ ಶರ್ಮಾಗೆ ವಿಶ್ರಾಂತಿ ನೀಡುವಂತೆ ಸಲಹೆ ನೀಡಿದೆಯಂತೆ. ಇದೇ ಕಾರಣಕ್ಕೆ ಶರ್ಮಾ ನ್ಯೂಜಿಲ್ಯಾಂಡ್ ಪ್ರವಾಸ ಕೈಬಿಟ್ಟಿದ್ದಾರೆ. ಈ ಬಗ್ಗೆ ಬಿಸಿಸಿಐ ಪತ್ರಿಕಾ ಪ್ರಕಟಣೆ ಹೊರಡಿಸಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...