alex Certify
ಕನ್ನಡ ದುನಿಯಾ       Mobile App
       

Kannada Duniya

ಭಾರತದ ವಿಜಯೋತ್ಸವದಲ್ಲಿ ರೋಹಿತ್ ಶರ್ಮಾ ಲಂಕಾ ಧ್ವಜ ಹಿಡಿದುಕೊಂಡಿದ್ದೇಕೆ?

ಶ್ರೀಲಂಕಾದಲ್ಲಿ ನಡೆದ ನಿದಾಹಸ್ ಟ್ರೋಫಿ ಗೆಲ್ಲುವ ಮೂಲಕ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಮತ್ತೊಂದು ಟಿ-20 ಸರಣಿಯನ್ನು ಕೈವಶ ಮಾಡಿಕೊಂಡಿದೆ. ಬಾಂಗ್ಲಾ ವಿರುದ್ಧದ ಕೊನೆಯ ಪಂದ್ಯದಲ್ಲಿ ಅಂತಿಮ ಬಾಲ್ ಗೆ ಸಿಕ್ಸರ್ ಬಾರಿಸುವ ಮೂಲಕ ದಿನೇಶ್ ಕಾರ್ತಿಕ್, ಭಾರತಕ್ಕೆ ಗೆಲುವು ತಂದುಕೊಟ್ಟಿದ್ದರು.

ಟೀಂ ಇಂಡಿಯಾ ನಾಲ್ಕು ವಿಕೆಟ್ ಗಳ ಜಯ ಸಾಧಿಸುತ್ತಿದ್ದಂತೆ ತಂಡದ ಆಟಗಾರರೆಲ್ಲ ಮೈದಾನಕ್ಕೆ ಓಡಿ ಬಂದು ದಿನೇಶ್ ಕಾರ್ತಿಕ್ ರನ್ನು ಮುತ್ತಿಕೊಂಡಿದ್ರು. ಬಳಿಕ ನಾಯಕ ರೋಹಿತ್ ಶರ್ಮಾ ಶ್ರೀಲಂಕಾದ ಧ್ವಜ ಹಿಡಿದು, ತಂಡದ ಇತರೆ ಆಟಗಾರರ ಜೊತೆ ಮೈದಾದಲ್ಲಿ ಮೆರವಣಿಗೆ ನಡೆಸಿದ್ರು.

ಟೀಂ ಇಂಡಿಯಾ ನಾಯಕ ಭಾರತದ ಧ್ವಜ ಹಿಡಿದು ಹೋಗುವ ಬದಲು ಶ್ರೀಲಂಕಾ ಧ್ವಜವನ್ನು ತೆಗೆದುಕೊಂಡಿದ್ಯಾಕೆ ಅನ್ನೋದು ಎಲ್ಲರ ಪ್ರಶ್ನೆ. ಶ್ರೀಲಂಕಾದ 70ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಈ ಸರಣಿ ಆಯೋಜಿಸಲಾಗಿತ್ತು. ಆದ್ರೆ ಲಂಕಾ ತಂಡ ಫೈನಲ್ ತಲುಪಲು ವಿಫಲವಾಗಿತ್ತು.

ಸರಣಿ ಆತಿಥ್ಯ ವಹಿಸಿದ ಶ್ರೀಲಂಕಾಗೆ ಗೌರವ ಸೂಚಿಸಬೇಕು ಜೊತೆಗೆ ಸಿಂಹಳೀಯರ ಅಭಿಮಾನಿಗಳಿಗಾಗಿ ರೋಹಿತ್ ಶರ್ಮಾ, ಲಂಕಾ ಧ್ವಜವನ್ನು ಹಿಡಿದು ವಿಜಯೋತ್ಸವ ಆಚರಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...