alex Certify
ಕನ್ನಡ ದುನಿಯಾ       Mobile App
       

Kannada Duniya

ಬೆಸ್ಟ್ ಬ್ಯಾಟ್ಸ್ ಮನ್ ಮಾತ್ರವಲ್ಲ, ಹೃದಯವಂತನೂ ಹೌದು ರೋಹಿತ್ ಶರ್ಮಾ….

ರೋಹಿತ್ ಶರ್ಮಾ ಬೆಸ್ಟ್ ಬ್ಯಾಟ್ಸ್ ಮನ್ ಅನ್ನೋದು ನಮಗೆಲ್ಲಾ ಗೊತ್ತಿದೆ. ಆದ್ರೆ ಅದಕ್ಕಿಂತ್ಲೂ ಮುಖ್ಯವಾಗಿ ಅವರೊಬ್ಬ ಒಳ್ಳೆ ಮನಸ್ಸಿರೋ ವ್ಯಕ್ತಿ. ಯಾಕಂದ್ರೆ ಶ್ರೀಲಂಕಾದ ಕ್ರಿಕೆಟ್ ಅಭಿಮಾನಿಯೊಬ್ಬನಿಗೆ ರೋಹಿತ್ ತುರ್ತು ಸಂದರ್ಭದಲ್ಲಿ ಹಣಕಾಸಿನ ಸಹಾಯ ಮಾಡಿದ್ದಾರೆ.

ಮೊಹಮದ್ ನೀಲಂ ಎಂಬಾತನ ತಂದೆ ಗಂಟಲು ಕ್ಯಾನ್ಸರ್ ನಿಂದ ಬಳಲುತ್ತಿದ್ದರು. ಹಾಗಾಗಿ ಕೂಡಲೇ ಆತ ಕೊಲಂಬೋಗೆ ತೆರಳಬೇಕಿತ್ತು. ದೆಹಲಿಯಲ್ಲಿ ನಡೆಯುತ್ತಿದ್ದ 3ನೇ ಏಕದಿನ ಪಂದ್ಯ ವೀಕ್ಷಿಸಲು ಮೊಹಮದ್ ಬಂದಿದ್ದ. ತಕ್ಷಣಕ್ಕೆ ವಿಮಾನದ ಟಿಕೆಟ್ ಬುಕ್ ಮಾಡಲು ಆತನ ಬಳಿ ಹಣವಿರಲಿಲ್ಲ.

ಸಚಿನ್ ತೆಂಡೂಲ್ಕರ್ ಅವರ ಅಪ್ಪಟ ಅಭಿಮಾನಿಯಾಗಿರೋ ಸುಧೀರ್ ಗೌತಮ್ ಈ ವಿಚಾರವನ್ನು ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿಗೆ ತಿಳಿಸಿದ್ದ. ತಕ್ಷಣವೇ ರೋಹಿತ್ ಶರ್ಮಾ ಲಂಕಾ ಅಭಿಮಾನಿಗೆ ವಿಮಾನದ ಟಿಕೆಟ್ ಬುಕ್ಕಿಂಗ್ ಮಾಡಿಕೊಟ್ಟಿದ್ದಾರೆ.

ಕೂಡಲೇ ಮೊಹಮ್ಮದ್ ನನ್ನು ಹೋಟೆಲ್ ಕೋಣೆಗೆ ಕರೆಸಿದ ರೋಹಿತ್ 20,000 ರೂಪಾಯಿ ಕೊಟ್ಟು, ಟಿಕೆಟ್ ವ್ಯವಸ್ಥೆ ಮಾಡಿದ್ರಂತೆ. ನಿಜಕ್ಕೂ ರೋಹಿತ್ ಹೃದಯವಂತ ಅಂತಾ ಮೊಹಮ್ಮದ್ ಕೊಂಡಾಡಿದ್ದಾನೆ. ಅಷ್ಟೇ ಅಲ್ಲ ತಂದೆಯ ಶಸ್ತ್ರಚಿಕಿತ್ಸೆಗೂ ಸಹಾಯ ಮಾಡುವುದಾಗಿ ರೋಹಿತ್ ಹೇಳಿದ್ದರಂತೆ, ಆದ್ರೆ ಮೊಹಮ್ಮದ್ ಅದನ್ನು ನಿರಾಕರಿಸಿದ್ದ. ವಿರಾಟ್ ಕೂಡ ಮೊಹಮ್ಮದ್ ಗೆ ಎಸ್ ಎಂ ಎಸ್ ಮಾಡಿ ಏನಾದ್ರೂ ಸಹಾಯ ಬೇಕಾದಲ್ಲಿ ತಿಳಿಸುವಂತೆ ಕೋರಿದ್ದರು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...