alex Certify
ಕನ್ನಡ ದುನಿಯಾ       Mobile App
       

Kannada Duniya

3ನೇ ದ್ವಿಶತಕ ಬಾರಿಸಿದ ರೋಹಿತ್ ಶರ್ಮಾ

ಟೀಂ ಇಂಡಿಯಾದ ಭರವಸೆಯ ಬ್ಯಾಟ್ಸ್ ಮನ್ ರೋಹಿತ್ ಶರ್ಮಾ ಮೊಹಾಲಿಯಲ್ಲಿ ಕಮಾಲ್ ಮಾಡಿದ್ದಾರೆ. ಶ್ರೀಲಂಕಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ನಾಯಕನಿಗೆ ತಕ್ಕ ಆಟವಾಡಿದ್ದಾರೆ. ಭರ್ಜರಿ ದ್ವಿಶತಕ ದಾಖಲಿಸಿದ್ದಾರೆ. ಇದು ಏಕದಿನ ಕ್ರಿಕೆಟ್ ನಲ್ಲಿ ರೋಹಿತ್ ಶರ್ಮಾರ 3ನೇ ದ್ವಿಶತಕ. ಶ್ರೀಲಂಕಾ ವಿರುದ್ಧ ರೋಹಿತ್ 2ನೇ ದ್ವಿಶತಕ ಬಾರಿಸಿದ್ದಾರೆ.

ಕೇವಲ 153 ಬಾಲ್ ಗಳಲ್ಲಿ ರೋಹಿತ್ 208 ರನ್ ಬಾರಿಸಿ ಔಟಾಗದೇ ಉಳಿದ್ರು. ರೋಹಿತ್ ದ್ವಿಶತಕದಲ್ಲಿ 12 ಸಿಕ್ಸರ್ ಹಾಗೂ 13 ಬೌಂಡರಿಗಳಿದ್ವು. ರೋಹಿತ್ ಶರ್ಮಾ ಜೊತೆ ಇನ್ನಿಂಗ್ಸ್ ಆರಂಭಿಸಿದ ಶಿಖರ್ ಧವನ್ 68 ರನ್ ಗಳಿಸಿದ್ರು. ವಿಶೇಷ ಅಂದ್ರೆ ಯುವ ಆಟಗಾರ ಶ್ರೇಯಸ್ ಅಯ್ಯರ್ ಕೂಡ 88 ರನ್ ಬಾರಿಸಿದ್ದಾರೆ.

ಶ್ರೇಯಸ್ ಹಾಗೂ ರೋಹಿತ್ ಶರ್ಮಾ 213 ರನ್ ಗಳ ಜೊತೆಯಾಟವಾಡಿದ್ರು. ಭರ್ಜರಿ ಬ್ಯಾಟಿಂಗ್ ನೆರವಿನಿಂದ ಟೀಂ ಇಂಡಿಯಾ 4 ವಿಕೆಟ್ ಕಳೆದುಕೊಂಡು 392 ರನ್ ಕಲೆಹಾಕಿದೆ. ಸಿಂಹಳೀಯರ ಎದುರು ಭಾರೀ ಸವಾಲನ್ನಿಟ್ಟಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...