alex Certify
ಕನ್ನಡ ದುನಿಯಾ       Mobile App
       

Kannada Duniya

ರೋಹಿತ್ ಪಾಸ್ ಆಗಿದ್ದಕ್ಕೆ ಅವಕಾಶ ವಂಚಿತರಾದ ರಹಾನೆ

ಟೀಮ್ ಇಂಡಿಯಾ ಆಟಗಾರ ರೋಹಿತ್ ಶರ್ಮಾ, ಬೆಂಗಳೂರಿನಲ್ಲಿ ನಡೆದ ಯೋ ಯೋ ಟೆಸ್ಟ್ ನಲ್ಲಿ ಪಾಸ್ ಆಗಿದ್ದು, ಈ ಮೂಲಕ ಕ್ರಿಕೆಟ್ ಸರಣಿಗಾಗಿ ಇಂಗ್ಲೆಂಡ್ ಗೆ ತೆರಳಲಿರುವ ಭಾರತ ತಂಡದಲ್ಲಿ ಸ್ಥಾನ ಪಡೆಯುವುದು ಖಚಿತವಾಗಿದೆ.

ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಯೋಯೋ ಟೆಸ್ಟ್ ನಡೆದಿದ್ದು, ಫಲಿತಾಂಶದಲ್ಲಿ ತಾವು ಪಾಸಾಗಿರುವ ವಿಷಯವನ್ನು ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಂ ನಲ್ಲಿ ಹಾಕುವ ಮೂಲಕ ರೋಹಿತ್ ಶರ್ಮಾ ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ.

ರೋಹಿತ್ ಶರ್ಮಾಗೆ ಟೀಮ್ ಇಂಡಿಯಾದಲ್ಲಿ ಸ್ಥಾನ ಖಚಿತವಾಗಿರುವ ಕಾರಣ ಅಜಿಂಕ್ಯಾ ರಹಾನೆ ಅವಕಾಶ ವಂಚಿತರಾಗಿದ್ದಾರೆ. ವೈಯಕ್ತಿಕ ಕಾರ್ಯಕ್ರಮದಲ್ಲಿ ಭಾಗವಹಿಸಲು ತೆರಳಿದ್ದ ರೋಹಿತ್ ಶರ್ಮಾ ಈ ಹಿಂದೆ ನಡೆದ ಟೆಸ್ಟ್ ಗೆ ಗೈರುಹಾಜರಾಗಿದ್ದರು. ಹಾಗಾಗಿ ಅಜಿಂಕ್ಯಾ ರಹಾನೆಗೆ ಸ್ಥಾನ ಸಿಗಬಹುದೆಂದು ಭಾವಿಸಲಾಗಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...