alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಕಿಂಗ್! ಟಿ -20 ಪಂದ್ಯ ಗೆದ್ದ ಆಸೀಸ್ ಆಟಗಾರರಿಗೆ ಕಲ್ಲೇಟು

ಗುವಾಹಟಿ: ಇಲ್ಲಿನ ಬರ್ಸಪರ ಕ್ರಿಕೆಟ್ ಮೈದಾನದಲ್ಲಿ ನಡೆದ ಟಿ -20 ಪಂದ್ಯದಲ್ಲಿ ಭಾರತ ತಂಡದ ವಿರುದ್ಧ ಆಸ್ಟ್ರೇಲಿಯಾ 8 ವಿಕೆಟ್ ಅಂತರದಿಂದ ಭರ್ಜರಿ ಜಯಗಳಿಸಿದೆ.

ಗೆದ್ದ ಖುಷಿಯಲ್ಲಿ ಮೈದಾನದಿಂದ ಹೋಟೆಲ್ ಗೆ ತೆರಳುತ್ತಿದ್ದ ಆಸೀಸ್ ಆಟಗಾರರ ಮೇಲೆ ಕಲ್ಲು ತೂರಿದ ಆಘಾತಕಾರಿ ಘಟನೆ ನಡೆದಿದೆ. ಆಸ್ಟ್ರೇಲಿಯಾ ತಂಡದವರು ತೆರಳುತ್ತಿದ್ದ ಬಸ್ ಮೇಲೆ ಕಲ್ಲು ತೂರಲಾಗಿದ್ದು, ಕಿಟಕಿ ಗ್ಲಾಸ್ ಪುಡಿಯಾಗಿವೆ.

ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಹಾಗೂ ಏಕದಿನ ಸರಣಿಯನ್ನು ಜಯಿಸಿರುವ ಟೀಂ ಇಂಡಿಯಾ ಟಿ -20 ಸರಣಿಯ ಮೊದಲ ಪಂದ್ಯವನ್ನು ಜಯಿಸಿದೆ. 2 ನೇ ಪಂದ್ಯವನ್ನು ಆಸೀಸ್ ಗೆದ್ದಿದ್ದು, ಆಕ್ರೋಶಗೊಂಡ ಅಭಿಮಾನಿಗಳು ಕಲ್ಲು ತೂರಿರಬಹುದೆಂದು ಹೇಳಲಾಗಿದೆ.

ಆಸೀಸ್ ನಾಯಕ ಡೇವಿಡ್ ವಾರ್ನರ್, ಆಟಗಾರ ಆರನ್ ಫಿಂಚ್, ಪಂದ್ಯ ಗೆದ್ದು ಹೋಟೆಲ್ ಗೆ ತೆರಳುತ್ತಿದ್ದ ನಮ್ಮ ತಂಡದ ಬಸ್ ಮೇಲೆ ಕಲ್ಲು ತೂರಿ ಭಯಪಡಿಸಲಾಗಿದೆ ಎಂದು ಈ ಫೋಟೋ ಪೋಸ್ಟ್ ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...