alex Certify
ಕನ್ನಡ ದುನಿಯಾ       Mobile App
       

Kannada Duniya

ರಾಬಿನ್ ಉತ್ತಪ್ಪರ ಗ್ರೇಟೆಸ್ಟ್ ಫೀಲಿಂಗ್

ಪ್ರಸಕ್ತ ಸಾಲಿನ ರಣಜಿ ಟೂರ್ನಿಯಲ್ಲಿ ರಾಬಿನ್ ಉತ್ತಪ್ಪ ಸೌರಾಷ್ಟ್ರ ಪರವಾಗಿ ಆಡುತ್ತಿದ್ದಾರೆ. 3 ಪಂದ್ಯಗಳಲ್ಲಿ 74 ರನ್ ಗಳನ್ನಷ್ಟೇ ಗಳಿಸಿರುವ ಅವರು, ನವೆಂಬರ್ 9 ರಿಂದ ರಾಜ್ ಕೋಟ್ ನಲ್ಲಿ ಗುಜರಾತ್ ವಿರುದ್ಧ ನಡೆಯಲಿರುವ ಪಂದ್ಯದಲ್ಲಿ ಮಿಂಚು ಹರಿಸುವ ನಿರೀಕ್ಷೆಯಲ್ಲಿದ್ದಾರೆ.

ರಾಜ್ ಕೋಟ್ ನಲ್ಲಿ ನಡೆದ ಜಾರ್ಖಂಡ್ ವಿರುದ್ಧದ ಪಂದ್ಯ ಶನಿವಾರ ಮುಕ್ತಾಯವಾಗಿದ್ದು, ಸಣ್ಣ ಬಿಡುವಿನೊಂದಿಗೆ ಉತ್ತಪ್ಪ ಬೆಂಗಳೂರಿಗೆ ಆಗಮಿಸಿದ್ದಾರೆ.

ಪತ್ನಿ ಮತ್ತು ಕಳೆದ ತಿಂಗಳಷ್ಟೇ ಜನಿಸಿದ ತಮ್ಮ ಪುತ್ರನೊಂದಿಗೆ ಸಂಭ್ರಮದ ಕ್ಷಣಗಳನ್ನು ಕಳೆದಿದ್ದಾರೆ. ಪತ್ನಿ- ಪುತ್ರನೊಂದಿಗೆ ಇರುವ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿರುವ ಅವರು, ದಿ ಗ್ರೇಟೆಸ್ಟ್ ಫೀಲಿಂಗ್ ಆನ್ ಅರ್ಥ್(ಭೂಮಿಯ ಮೇಲಿನ ಸುಂದರ ಅನುಭವದ ಕ್ಷಣ) ಎಂದು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...