alex Certify
ಕನ್ನಡ ದುನಿಯಾ       Mobile App
       

Kannada Duniya

ರಿಶಬ್ ಪಂತ್ ದಾಖಲೆ, 32 ಎಸೆತಗಳಲ್ಲಿ ಶತಕ

ನವದೆಹಲಿ: ದೆಹಲಿ ತಂಡದ ಬ್ಯಾಟ್ಸ್ ಮನ್ ರಿಶಬ್ ಪಂತ್ ಟಿ 20 ಯಲ್ಲಿ ಶರವೇಗದ ಶತಕ ಗಳಿಸಿದ್ದಾರೆ. 38 ಎಸೆತಗಳಲ್ಲಿ 8 ಬೌಂಡರಿ, 12 ಸಿಕ್ಸರ್ ಒಳಗೊಂಡ 116 ರನ್ ಗಳಿಸಿದ್ದಾರೆ. ಇದು ಟಿ 20 ಯಲ್ಲಿ 2 ನೇ ಅತಿವೇಗದ ಶತಕವಾಗಿದೆ.

ಸೈಯದ್ ಮುಷ್ತಾಕ್ ಅಲಿ ಟಿ 20 ಟ್ರೋಫಿ ಕ್ರಿಕೆಟ್ ಟೂರ್ನಿಯ ಲೀಗ್ ಪಂದ್ಯದಲ್ಲಿ ಹಿಮಾಚಲ ಪ್ರದೇಶ ವಿರುದ್ಧ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ರಿಶಬ್ ಪಂತ್, 32 ಎಸೆತಗಳಲ್ಲಿ ಶತಕ ಗಳಿಸುವ ಮೂಲಕ ಟಿ 20 ಯಲ್ಲಿ 2 ನೇ ಅತಿವೇಗದ ಶತಕ ಗಳಿಸಿದ್ದಾರೆ.

ಟಿ 20 ಯಲ್ಲಿ ವೇಗದ ಶತಕ ಗಳಿಸಿದವರಲ್ಲಿ ರಿಶಬ್ ಪಂತ್ ಮೊದಲ ಭಾರತೀಯರಾಗಿದ್ದಾರೆ. ಕ್ರಿಸ್ ಗೇಲ್ 2013 ರಲ್ಲಿ ಐ.ಪಿ.ಎಲ್.ನಲ್ಲಿ ಪುಣೆ ವಾರಿಯರ್ಸ್ ವಿರುದ್ಧ 30 ಎಸೆತಗಳಲ್ಲಿ ಶತಕ ಗಳಿಸಿದ್ದರು.

ಮೊದಲಿಗೆ ಬ್ಯಾಟಿಂಗ್ ಮಾಡಿದ ಹಿಮಾಚಲ ಪ್ರದೇಶ 144 ರನ್ ಗಳ ಗುರಿ ನೀಡಿತ್ತು. ರಿಶಬ್ ಪಂತ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದು, 11.4 ಓವರ್ ಗಳಲ್ಲಿ ವಿಕೆಟ್ ನಷ್ಟವಿಲ್ಲದೇ ದೆಹಲಿ ತಂಡ 148 ರನ್ ಗಳಿಸಿ 10 ವಿಕೆಟ್ ಅಂತರದಿಂದ ಜಯಗಳಿಸಿದೆ. ರಿಶಬ್ ಅಜೇಯ 116 ರನ್ ಗಳಿಸಿದ್ದು, ಗೌತಮ್ ಅಜೇಯ 30 ರನ್ ಗಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಪಡೆಯುತ್ತಾ ಬಿಜೆಪಿ...?

    View Results

    Loading ... Loading ...