alex Certify
ಕನ್ನಡ ದುನಿಯಾ       Mobile App
       

Kannada Duniya

ತಂದೆ ಕಳೆದುಕೊಂಡ ನೋವಿನಲ್ಲೂ ಅರ್ಧ ಶತಕ ಸಿಡಿಸಿದ ಆಟಗಾರ

pant_uaev6we

ಎರಡು ದಿನಗಳ ಹಿಂದಷ್ಟೆ ತಂದೆಯನ್ನು ಕಳೆದುಕೊಂಡಿರುವ ಯುವ ಕ್ರಿಕೆಟ್ ಆಟಗಾರ ರಿಶಭ್ ಪಂತ್ ಶನಿವಾರ ಐಪಿಎಲ್ ಪಂದ್ಯದಲ್ಲಿ ಕಾಣಿಸಿಕೊಂಡಿದ್ದಾರೆ. ರಾಯಲ್ ಚಾಲೆಂಜರ್ಸ್ ವಿರುದ್ಧ ಬೆಂಗಳೂರಿನಲ್ಲಿ ನಡೆದ ಪಂದ್ಯದಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ಪರ ಬ್ಯಾಟ್ ಬೀಸಿದ್ರು. 33 ಎಸೆತಗಳಲ್ಲಿ ಅರ್ಧ ಶತಕ ಸಿಡಿಸಿ ತಂಡಕ್ಕೆ ಆಸರೆಯಾದ್ರು.

ರಿಶಭ್ ಪಂತ್ ಉತ್ತಮ ಪ್ರದರ್ಶನದ ನಡುವೆಯೂ ಡೆಲ್ಲಿ ಸೋಲುಂಡಿತು. ಬುಧವಾರ ರಿಶಭ್ ಪಂತ್ ತಂದೆ ರಾಜೇಂದ್ರ ಪಂತ್ ವಿಧಿವಶರಾಗಿದ್ದಾರೆ. ಉತ್ತರಖಂಡದ ರೂರ್ಕಿಯಲ್ಲಿ ಹೃದಯಾಘಾತದಿಂದ ರಾಜೇಂದ್ರ ಕೊನೆಯುಸಿರೆಳೆದಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಊರಿಗೆ ಹೋಗಿದ್ದ ರಿಶಭ್ ಪಂತ್, ತಂದೆ ಅಂತಿಮ ಸಂಸ್ಕಾರ ಮುಗಿಸಿ ವಾಪಸ್ ತಂಡಕ್ಕೆ ಸೇರಿಕೊಂಡಿದ್ದಾರೆ. ಗುರುವಾರ ಅಂತ್ಯಸಂಸ್ಕಾರ ಮುಗಿಸಿ ಶುಕ್ರವಾರವೇ ತಂಡ ಸೇರಿಕೊಂಡ ರಿಶಭ್ ಅಭ್ಯಾಸ ನಡೆಸಿದ್ದರು ಎನ್ನಲಾಗಿದೆ. ತಂದೆ ಕಳೆದುಕೊಂಡ ನೋವಿನಲ್ಲಿಯೂ ಉತ್ತಮ ಆಟ ಪ್ರದರ್ಶಿಸಿದ ರಿಶಭ್ ಧೋನಿ ಉತ್ತರಾಧಿಕಾರಿ ಎನ್ನಲಾಗ್ತಾ ಇದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...