alex Certify
ಕನ್ನಡ ದುನಿಯಾ       Mobile App
       

Kannada Duniya

ಒಲಂಪಿಕ್ಸ್ ಆರಂಭಕ್ಕೂ ಮುನ್ನವೇ ಚೀನಾ ದಾಖಲೆ

rio olympicsಇನ್ನು ಕೆಲ ದಿನಗಳಲ್ಲಿ ಆರಂಭವಾಗಲಿರುವ ರಿಯೋ ಒಲಂಪಿಕ್ಸ್ ಗೆ ಕ್ಷಣಗಣನೆ ಆರಂಭವಾಗಿದ್ದು, ಪದಕಗಳ ಪಟ್ಟಿಯಲ್ಲಿ ಸದಾ ಮುಂಚೂಣಿಯಲ್ಲಿರುವ ಚೀನಾ, ಈ ಬಾರಿ ಒಲಂಪಿಕ್ಸ್ ಗೂ ಮುನ್ನವೇ ಹೊಸ ದಾಖಲೆ ಮಾಡಿದೆ.

ಈ ಬಾರಿ ಚೀನಾದ 416 ಕ್ರೀಡಾಪಟುಗಳು ಒಲಂಪಿಕ್ಸ್ ನಲ್ಲಿ ಭಾಗವಹಿಸುತ್ತಿದ್ದು, ಈ ಪೈಕಿ 256 ಮಹಿಳೆ ಹಾಗೂ 160 ಮಂದಿ ಪುರುಷರಿದ್ದಾರೆ. ಇವರುಗಳು 26 ಕ್ರೀಡೆಗಳಲ್ಲಿ ತಮ್ಮ ದೇಶವನ್ನು ಪ್ರತಿನಿಧಿಸಲಿದ್ದಾರೆ. 2012 ರಲ್ಲಿ ನಡೆದ ಲಂಡನ್ ಒಲಂಪಿಕ್ಸ್ ನಲ್ಲಿ ಚೀನಾದ 396 ಕ್ರೀಡಾಪಟುಗಳು  ಭಾಗವಹಿಸಿದ್ದು, ಪದಕ ಪಟ್ಟಿಯಲ್ಲಿ ಅಮೆರಿಕಾ ನಂತರದ ಸ್ಥಾನ ಗಳಿಸಿತ್ತು.

ಈ ಬಾರಿಯ ಕ್ರೀಡಾಪಟುಗಳ ಪೈಕಿ 14 ವರ್ಷದ ಯು ಯನಾನ್ ಅತಿ ಕಿರಿಯ ಕ್ರೀಡಾಪಟುವಾಗಿದ್ದರೆ, 39 ವರ್ಷದ ಚನ್ ಯಂಗ್ ಹಿರಿಯ ಕ್ರೀಡಾಪಟುವಾಗಿದ್ದಾರೆ. ಪದಕಗಳ ಬೇಟೆಯಲ್ಲಿ ಈ ಬಾರಿ ಪ್ರಥಮ ಸ್ಥಾನ ಗಳಿಸುವ ವಿಶ್ವಾಸವನ್ನು ಚೀನಾ ಹೊಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...