alex Certify
ಕನ್ನಡ ದುನಿಯಾ       Mobile App
       

Kannada Duniya

ಸಲ್ಮಾನ್ ಆಯ್ಕೆಗೆ ಈಗ ಮಿಲ್ಕಾ ಸಿಂಗ್ ರಿಂದ ವಿರೋಧ

milkha-singh-563ರಿಯೋ ಒಲಂಪಿಕ್ಸ್ ನಲ್ಲಿ ಭಾರತ ತಂಡದ ರಾಯಭಾರಿಯನ್ನಾಗಿ ಖ್ಯಾತ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರನ್ನು ಭಾರತೀಯ ಒಲಂಪಿಕ್ ಸಂಸ್ಥೆ ನೇಮಕ ಮಾಡುತ್ತಿದ್ದಂತೆಯೇ ಕ್ರೀಡಾ ವಲಯದಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದು, ಯೋಗೇಶ್ವರ್ ದತ್ ಬಳಿಕ ಇದೀಗ ಮಿಲ್ಕಾ ಸಿಂಗ್ ಅಪಸ್ವರವೆತ್ತಿದ್ದಾರೆ.

ಭಾರತೀಯ ಒಲಂಪಿಕ್ ಸಂಸ್ಥೆ ತಪ್ಪು ನಿರ್ಧಾರ ಕೈಗೊಂಡಿದೆ ಎಂದು ಟೀಕಿಸಿರುವ ಮಿಲ್ಕಾ ಸಿಂಗ್, ಒಲಂಪಿಕ್ಸ್ ನಲ್ಲಿ ಭಾಗವಹಿಸುವ ಸ್ಪರ್ಧಿಗಳೇ ಭಾರತದ ರಾಯಭಾರಿಗಳು ಎಂದಿದ್ದಾರೆ. ಹಾಗೊಂದು ವೇಳೆ ರಾಯಭಾರಿಯನ್ನು ನೇಮಿಸಬೇಕೆಂದಿದ್ದರೆ ಪಿ.ಟಿ. ಉಷಾ, ರಾಜವರ್ಧನ್ ಸಿಂಗ್ ರಾಥೋರ್ ಅಥವಾ ಅಜಿತ್ ಪಾಲ್ ಅವರನ್ನು ಪರಿಗಣಿಸಬೇಕಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.

ಬಾಲಿವುಡ್ ಕಾರ್ಯಕ್ರಮಗಳಿಗೆ ಕ್ರೀಡಾ ಸಾಧಕರನ್ನು ರಾಯಭಾರಿಯನ್ನಾಗಿ ನೇಮಿಸಲಾಗುತ್ತದೆಯೇ ಎಂದು ಪ್ರಶ್ನಿಸಿರುವ ಮಿಲ್ಕಾ ಸಿಂಗ್, ಭಾರತೀಯ ಒಲಂಪಿಕ್ ಸಂಸ್ಥೆಯ ಈ ತೀರ್ಮಾನದ ಕುರಿತು ಸರ್ಕಾರ ಮಧ್ಯ ಪ್ರವೇಶಿಸಬೇಕೆಂದು ಆಗ್ರಹಿಸಿದ್ದಾರೆ. ಈ ಮಧ್ಯೆ ಯೋಗೇಶ್ವರ್ ದತ್, ಸಲ್ಮಾನ್ ಖಾನ್ ರ ಮುಂಬರುವ ‘ಸುಲ್ತಾನ್’ ಚಿತ್ರದ ಪ್ರಮೋಶನ್ ಗಾಗಿ ಈ ನೇಮಕ ಮಾಡಿರಬಹುದೆಂಬ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿದ್ದರಲ್ಲದೇ ಚಿತ್ರದ ಪ್ರಮೋಷನ್ ಮಾಡಲು ಒಲಂಪಿಕ್ಸ್ ವೇದಿಕೆಯಲ್ಲ ಎಂದು ಕಟಕಿಯಾಡಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...